Ad imageAd image

ಕಾರು ಅಪಘಾತದಲ್ಲಿ ನಟಿ ಹರ್ಷಿಲ್ ಕಾಲಿಯಾ ನಿಧನ

Nagesh Talawar
ಕಾರು ಅಪಘಾತದಲ್ಲಿ ನಟಿ ಹರ್ಷಿಲ್ ಕಾಲಿಯಾ ನಿಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಜೈಪುರ(Jaipur): ಕಾರು ಅಪಘಾತದಲ್ಲಿ ನಟಿ ಹರ್ಷಿಲ್ ಕಾಲಿಯಾ(30) ನಿಧನರಾಗಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದ ವೇಳೆ ಕಳೆದ ರಾತ್ರಿ ಸುಮಾರು 11.30ರ ವೇಳೆಗೆ ಶಿಪ್ರಾ ಪಾತ್ ಹತ್ತಿರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿದೆ. ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ತಲೆಗೆ ಗಂಭೀರ ಗಾಯವಾಗಿದ್ದರಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರೂಪದರ್ಶಿಯಾಗಿ, ಟಿವಿ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ಹಲವು ಹಾಡುಗಳಲ್ಲಿಯೂ ನಟಿಸಿದ್ದಾರೆ. ಕ್ರೈಂ ನೆಕ್ಸ್ಟ್ ಡೋರ್ ಅನ್ನೋ ವೆಬ್ ಸರಣಿಯಲ್ಲಿ ನಟಿಸಿದ್ದರು. ಬುಧವಾರ ರಾತ್ರಿ ಮನೆಗೆ ಹೊರಟಿದ್ದ ವೇಳೆ ಕಾರಿನ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿವೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.

WhatsApp Group Join Now
Telegram Group Join Now
Share This Article