ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಾಲಿವುಡ್ ಸೇರಿದಂತೆ ಸೌಥ್ ಸಿನಿ ದುನಿಯಾದಲ್ಲಿ ನಟಿಸಿರುವ ನಟಿ ಹೀನಾ ಖಾನ್(actor hina khan) ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೂರನೇ ಹಂತದಲ್ಲಿರುವ ಸ್ತನ ಕ್ಯಾನ್ಸರ್(Breast Cancer) ವಿರುದ್ಧ ಹೋರಾಡುತ್ತಿರುವುದಾಗಿ ತಿಳಿಸಿದ್ದಾರೆ.
ನಾನು ಪ್ರತಿ ಸಾರಿ ಕೂದಲಿಗೆ ಕೈ ಹಾಕಿದಾಗ ಅದು ಉದುರುವುದನ್ನು ನೋಡಿ ಕಷ್ಟವಾಗುತ್ತೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗುವಂತೆ ಮಾಡುತ್ತದೆ. ಮಾನಸಿಕ ಆರೋಗ್ಯ ಸರಿಯಾಗಿದ್ದರೆ ದೈಹಿಕ ಆರೋಗ್ಯ 10 ಪಟ್ಟು ಹೆಚ್ಚಾಗುತ್ತೆ. ನೀವು ಇದನ್ನು ಅಪ್ಪಿಕೊಂಡರೆ ಮಾತ್ರ ಜಯಿಸಬಹುದು. ಇದು ತುಂಬಾ ನೋವು, ಕಷ್ಟದಿಂದ ಕೂಡಿದೆ. ಇದರಿಂದ ಹೊರ ಬರಲು ಪ್ರಯತ್ನಿಸಬೇಕೇ ಹೊರತು ಸುಮ್ಮನೆ ಇರಬಾರದು ಎಂದಿದ್ದು, ತಲೆ ಕೂದಲು(Head Shaves) ಕತ್ತರಿಸುವ ವಿಡಿಯೋ ಸಹ ಇಲ್ಲಿದೆ.