ಪ್ರಜಾಸ್ತ್ರ ಸುದ್ದಿ
ಕೊಚ್ಚಿ(Kochi): ಮಲಯಾಳಂ ನಟಿ ಹನಿ ರೋಸ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಉದ್ಯಮಿ ಬಾಬಿ ಚೆಮ್ಮನ್ನೂರು ಅವರಿಗೆ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ಪ್ರಕರಣದ ವಿವರವಾದ ಆದೇಶವನ್ನು ಮಧ್ಯಾಹ್ನ 3.30ಕ್ಕೆ ಹೊರಡಿಸಲಾಗುವುದು ಎಂದು ನ್ಯಾಯಮೂರ್ತಿ ಪಿ.ವಿ ಕುಂಞಕೃಷ್ಣನ್ ಹೇಳಿದ್ದಾರೆ.
ಜನವರಿ 7ರಂದು ನಟಿ ಹನಿ ರೋಸ್, ಉದ್ಯಮಿ ಬಾಬಿ ಚೆಮ್ಮನ್ನೂರು ವಿರುದ್ಧ ದೂರು ದಾಖಲಿಸಿದ್ದರು. ಅವರನ್ನು ವಯನಾಡಿನಲ್ಲಿ ಬಂಧಿಸಲಾಗಿತ್ತು. ಜನವರಿ 9ರಂದು ಸ್ಥಳೀಯ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಹೀಗಾಗಿ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಇದೀಗ ಹೈಕೋರ್ಟ್ ನಲ್ಲಿ ಜಾಮೀನು ಮಂಜೂರು ಆಗಿದೆ.
ನಟಿ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಡಬಲ್ ಮೀನಿಂಗ್ ಬರುವ ಅರ್ಥದಲ್ಲಿವೆ. ಮಾಧ್ಯಮಗಳಲ್ಲಿನ ಅವರ ಬಹುತೇಕ ಎಲ್ಲ ಪೋಸ್ಟ್ ಗಳು ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿವೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿ ಜಾಮೀನು ನೀಡಿದರೆ ತಪ್ಪು ಸಂದೇಶ ಹೋಗುತ್ತೆ ಎಂದಿದ್ದರು.