ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನಂಬಿದ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಆದರೆ, ಇದೊಂದು ಸುಳ್ಳು ಸುದ್ದಿ ಎಂದು ಸ್ವತಃ ನಟಿ ಕಾಜಲ್ ತಿಳಿಸಿದ್ದಾರೆ. ಎಕ್ಸ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಬರೆದು, ನಾನು ಆರಾಮಾಗಿದ್ದೇನೆ. ಇದನ್ನು ಯಾರು ನಂಬಬೇಡಿ ಎಂದಿದ್ದಾರೆ.
ನಾನು ಅಪಘಾತಕ್ಕೆ ಇಡಾಗಿದ್ದೇನೆ ಎಂದು ಕೆಲವು ಆಧಾರ ರಹಿತಿ ಸುದ್ದಿಗಳು ಬಂದಿವೆ. ಮೃತಪಟ್ಟಿದ್ದೇನೆ ಎಂದು ಹೇಳಿದ್ದಾರೆ. ನಿಜ ಹೇಳಬೇಕು ಎಂದರೆ ಇದು ತಮಾಷೆಯ ಸುದ್ದಿಯಾಗಿದೆ. ಇದು ಸುಳ್ಳು. ದೇವರ ಆಶೀರ್ವಾದಿಂದ ನಾನು ಆರೋಗ್ಯವಾಗಿದ್ದೇನೆ. ಸುಳ್ಳಿ ಸುದ್ದಿ ನಂಬಬೇಡಿ ಹಾಗೂ ಹರಡಬೇಡಿ. ಸಕಾರಾತ್ಮಕ ಚಿಂತನೆ ಹಾಗೂ ಸತ್ಯದ ಕಡೆ ಗಮನ ಹರಿಸೋಣ ಎಂದು ಬರೆದಿದ್ದಾರೆ.