ಪ್ರಜಾಸ್ತ್ರ ಸುದ್ದಿ
ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ನಟಿಸಿರುವ ಎಮರ್ಜೆನ್ಸಿ(emergency) ಚಿತ್ರ ಬಿಡುಗಡೆ ದಿನಾಂಕ ಅನೌನ್ಸ್ ಮಾಡಲಾಗಿದೆ. ಈ ಕುರಿತು ತಮ್ಮ ಇನ್ಸಾಟಾಗ್ರಾಮ್ ನಲ್ಲಿ ನಟಿ ಮಾಹಿತಿ ಹಂಚಿಕೊಂಡಿದ್ದು, ಸೆಪ್ಟಂಬರ್ 6ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ರಾಜಕೀಯದ ಕೆಲವು ವಿಚಾರಗಳ ಮೇಲೆ ಸಿನಿಮಾ ಮಾಡಲಾಗಿದೆ. ನಟಿ ಕಂಗನಾ ಇಂದಿರಾ(Indira Gandhi) ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ.
ಝಿ ಸ್ಟುಡಿಯೋಸ್ ಜೊತೆಗೆ ನಟಿ ಕಂಗನಾ ನಿರ್ಮಾಣದ ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ನಟನೆಯ ಜೊತೆಗೆ ನಿರ್ದೇಶನವನ್ನು ಸಹ ಕಂಗನಾ ರಣಾವತ್ ಮಾಡಿದ್ದಾರೆ. ಝಾನ್ಸಿ ರಾಣಿ(jansi rani lakshmi bai) ಲಕ್ಷ್ಮಿಬಾಯಿ ಎಂದೇ ಖ್ಯಾತಿಯಾದ ರಾಣಿ ಮಣಿಕರ್ಣಿಕಾ(manikarnika) ಜೀವನಾಧರಿತ ಮಣಿಕರ್ಣಿಕಾ ಸಿನಿಮಾವನ್ನು ಕ್ರಿಶ್ ಜಗರ್ಲ್ ಮುಡಿ ಜೊತೆಗೆ ನಿರ್ದೇಶನ ಸಹ ನಟಿ ಕಂಗನಾ(kangana ranaut) ಮಾಡಿದ್ದಾರೆ. ಇದೀಗ ಎಮರ್ಜೆನ್ಸಿ ಚಿತ್ರವನ್ನು ಪೂರ್ಣಪ್ರಮಾಣದಲ್ಲಿ ಅವರೆ ನಿರ್ದೇಶನ ಮಾಡಿದ್ದಾರೆ. ರಿತೀಶ್ ಶಾ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಹಿರಿಯ ನಟ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್ ಸೇರಿದಂತೆ ಅನೇಕರು ನಟಿಸಿದ್ದಾರೆ.