ಪ್ರಜಾಸ್ತ್ರ ಸುದ್ದಿ
ಪಣಜಿ(Panaji): ಸೌಥ್ ಸಿನಿ ದುನಿಯಾದ ಸ್ಟಾರ್ ನಟಿ ಕೀರ್ತಿ ಸುರೇಶ್ ಉದ್ಯಮಿ ಆಂಟನಿ ಥಟ್ಟಿಲ್ ಜೊತೆಗೆ ಕೇರಳದ ಅಂಯ್ಯಾಗರ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಆಂಟನಿ ದುಬೈನಲ್ಲಿ ಉದ್ಯಮಿಯಾಗಿದ್ದಾರೆ. ಕಳೆದ 15 ವರ್ಷಗಳಿಂದ ಈ ಜೋಡಿ ನಡುವೆ ಸ್ನೇಹವಿತ್ತು ಎಂದು ಹೇಳಲಾಗುತ್ತಿದೆ. ಎರಡು ಕಡೆ ಕುಟುಂಬಸ್ಥರು ಕೂಡಿಕೊಂಡು ಸಂಭ್ರಮದಿಂದ ಮದುವೆ ನೆರವೇರಿಸಿದ್ದಾರೆ.
ಈ ಕುರಿತು ನಟಿ ಕೀರ್ತಿ ಸುರೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಫಾರ್ ದಿ ಲವ್ ಆಫ್ ನೈಕೆ ಎಂದು ಬರೆದು ಫೋಟೋಗಳನ್ನು ಹಂಚಿಕೊಂಡಿದ್ದು, ಇಷ್ಟು ದಿನಗಳ ಕಾಲ ಅವರನ್ನು ಮದುವೆಯಾಗುತ್ತಾರೆ. ಇವರನ್ನು ಮದುವೆಯಾಗುತ್ತಾರೆ ಎನ್ನುವುದಕ್ಕೆ ತೆರೆ ಬಿದ್ದಿದೆ.