ಪ್ರಜಾಸ್ತ್ರ ಸುದ್ದಿ
ನವದೆಹಲಿ(New delhi): ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್(Kangana Ranaut) ಪದೆಪದೆ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈಗ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮದ್ಯ ಅಥವ ಡ್ರಗ್ಸ್ ಸೇವನೆ ಮಾಡಿ ಬರುತ್ತಾರೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಜಾಸತಾತ್ಮಕವಾಗಿ ಪ್ರಧಾನಿಯನ್ನು ಆಯ್ಕೆ ಮಾಡಲಾಗಿದೆ. ಇದನ್ನು ರಾಹುಲ್ ಗಾಂಧಿಯವರು(Rahul Gandhi) ಗೌರವಿಸುವುದಿಲ್ಲವೆ ಎಂದಿದ್ದಾರೆ.
ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ. ಅಂದು ಕುರುಕ್ಷೇತ್ರದಲ್ಲಿ ಅಭಿಮನ್ಯುನನ್ನು 6 ಮಂದಿ ಸೇರಿಕೊಂಡು ಚಕ್ರವ್ಯೂಹದಲ್ಲಿ ಸಿಲುಕಿಸಿದರು. ಇದನ್ನು ಪದ್ಮವ್ಯೂಹ ಎಂದು ಕರೆಯುತ್ತಾರೆ. ಪದ್ಮ ಅಂದರೆ ಕಮಲ. ಪ್ರಧಾನಿ ಮೋದಿಯವರು ಕಮಲದ ಚಿತ್ರವನ್ನು ಎದೆಯ ಮೇಲೆ ಹಾಕಿಕೊಳ್ಳುತ್ತಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಷ್ಟ್ರೀಯ ಭದ್ರತಾ ಸಲಹೆಗಾರ ದಾಬೋಲ್ಕರ್, ಉದ್ಯಮಿಗಳಾದ ಅಂಬಾನಿ, ಅದಾನಿ ದೇಶವನ್ನು ಚಕ್ರವ್ಯೂಹದೊಳಗೆ ಸಿಲುಕಿಸಿದ್ದಾರೆ. ನಾವು ಅದನ್ನು ಜಾತಿಗಣತಿ ಮೂಲಕ ಬೇಧಿಸುತ್ತೇವೆ ಎಂದು ಸಂಸತ್ತಿನಲ್ಲಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್, ನಾನು ಸಂಸತ್ತಿಗೆ ಹೊಸಬಳು ಇರಬಹುದು. ಅವರು ಸಂಸತ್ತಿನಲ್ಲಿ ನೀಡುವ ಹೇಳಿಕೆಗಳು ಕೇಳಿ ಆಘಾತಗೊಂಡಿದ್ದೇನೆ. ಮದ್ಯ ಸೇವಿಸಿ ಅಥವ ಡ್ರಗ್ಸ್ ಮತ್ತಿನಲ್ಲಿಯೇ ಬರುತ್ತಾರೆ. ಅವರನ್ನು ಪರೀಕ್ಷೆಗೆ ಒಳಪಡಿಸಬೇಕು ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.