ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡದ ಕಿರುತರೆ ನಟಿ ಹಾಗೂ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ನಮ್ರತಾಗೌಡಗೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದ ಮೂಲಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಸ್ವತಃ ನಟಿ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಈ ಬಗ್ಗೆ ಹೇಳಿದ್ದಾರೆ. ರೋಷನ್ ಎನ್ನುವ ಹೆಸರಿನ ವ್ಯಕ್ತಿ, ನಾನು ಕೆಲ ರಾಜಕಾರಣಿಗಳು ಹಾಗೂ ವಿಐಪಿಗಳೊಂದಿಗೆ ಕೆಲಸ ಮಾಡುತ್ತೇನೆ. ಅವರಿಗೆ ನಾನು ಡೇಟಿಂಗ್ ವ್ಯವಸ್ಥೆ ಮಾಡುತ್ತೇನೆ. ನಿಮಗೆ ಆಸಕ್ತಿ ಇದ್ದರೆ ವ್ಯಾನಿಷ್ ಮೋಡ್ ನಲ್ಲಿ ಕಳಿಸಿ ಎಂದು ಮೆಸೇಜ್ ಮಾಡಿದ್ದಾನೆ.
ನಿಮ್ಮ ಖಾಸಗಿ ನಂಬರ್ ಅಥವ ಫೋಟೋ ಕಳಿಸಬೇಕಾಗಿಲ್ಲ. ನಿಮಗೆ ದೊಡ್ಡ ಮೊತ್ತದ ಹಣ ಪಾವತಿ ಮಾಡಲಾಗುವುದು. ಇದು ಶೇಕಡ 200ರಷ್ಟು ಖಾಸಗಿ ವಿಚಾರ ಎಂದು ಮೆಸೇಜ್ ಮಾಡಿರುವುದನ್ನು ಸ್ಕ್ರೀನ್ ಶಾಟ್ ತೆಗೆದು ನಟಿ ನಮ್ರತಾಗೌಡ ಪೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ಜೂನ್ ನಲ್ಲಿಯೂ ಇದೇ ರೀತಿ ಮೆಸೇಜ್ ಕಳಿಸಿದ್ದ ಎಂದು ಹೇಳಲಾಗುತ್ತಿದೆ. ಆದರೆ, ಅಸಲಿಗೆ ಈ ರೋಷನ್ ಯಾರು? ಯಾವ ರಾಜಕಾರಣಿಗಳ ಬಳಿ ಕೆಲಸ ಮಾಡುತ್ತಾನೆ ಅನ್ನೋದು ಯಾವುದೂ ಗೊತ್ತಿಲ್ಲ.