ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಸಹೋದರಿ ಅಲಿಯಾ ಫಕ್ರಿ(43) ಬಂಧನವಾಗಿದೆ. ಮಾಜಿ ಪ್ರಿಯಕರ 35 ವರ್ಷದ ಎಡ್ವರ್ಡ್ ಜೇಕಬ್, 33 ವರ್ಷದ ಅನಸ್ತಾಸಿಯಾ ಎಟಿಯನ್ನೆ ಹತ್ಯೆ ಮಾಡಿದ ಪ್ರಕರಣ ಸಂಬಂಧ ಬಂಧಿಸಲಾಗಿದೆ. ಜೇಕಬ್ಸ್ ಇದ್ದ ಎರಡು ಅಂತಸ್ತಿನ ಗ್ಯಾರೇಜ್ ಗೆ ಬೆಂಕಿ ಹಚ್ಚಿದರು. ಇದರಿಂದಾಗಿ ತಪ್ಪಿಸಿಕೊಳ್ಳಲು ಆಗದೆ ಒಳಗೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮಗ ಜೇಕಬ್ಸ್ ಒಂದು ವರ್ಷದ ಹಿಂದೆ ಅಲಿಯಾ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದ. ಆದರೆ, ಆಕೆ ಅವನನ್ನು ಹಿಂಬಾಲಿಸುತ್ತಿದ್ದಳು ಎಂದು ಆತನ ತಾಯಿ ಹೇಳಿದ್ದಾರೆ. ಕಟ್ಟಡಕ್ಕೆ ಬೆಂಕಿ ಹಚ್ಚಿದ್ದು, ನೀವೆಲ್ಲರೂ ಇಂದು ಸಾಯುತ್ತೀರಿ ಎಂದು ಕೂಗಾಗಿಡಿದ್ದಳು ಅಂತಾ ಹೇಳಲಾಗಿದೆ. ನನ್ನ ಮಗಳು ಕೊಲೆ ಮಾಡುವಂತವಳಲ್ಲ ಎಂದು ಅಲಿಯಾ ಫಕ್ರಿ ತಾಯಿ ಹೇಳಿದ್ದಾಳೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದೆ.