ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ 2ನೇ ಆರೋಪಿ ಆಗಿರುವ ನಟ ದರ್ಶನ್ ಮೊದಲ ಆರೋಪಿಯಾಗಿರುವ ಆಪ್ತ ಗಳೆತಿ ಪವಿತ್ರಾಗೌಡ ಸೇರಿದಂತೆ 6 ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಈ ಸಂಬಂಧ ಪೋಸ್ಟ್ ಮಾಡಿರುವ ನಟಿ, ಮಾಜಿ ಸಂಸದೆ ರಮ್ಯಾ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದಿದ್ದಾರೆ. ಈ ಬಗ್ಗೆ ಇನ್ಸ್ ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಇತರರ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಆದೇಶ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವ ಸಂದೇಶ ನೀಡಿದೆ.
ನಾನು ಹೇಳುವುದು ಏನು ಅಂದರೆ ನ್ಯಾಯಯುತವಾದ ಪ್ರಕ್ರಿಯೆ ಅನುಸರಿಸಿ. ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಡಿ. ನ್ಯಾಯ ಸಿಗುವ ಪ್ರಕ್ರಿಯೆ ಸುದೀರ್ಗ ಹಾಗೂ ಹಾದಿ ಕಠಿಣವಾಗಿದ್ದರೂ ಕೊನೆಯಲ್ಲಿ ಬೆಳಕಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸತ್ಯವಂತರಾಗಿರಿ ಎನ್ನುವ ಬರಹವನ್ನು ಹಂಚಿಕೊಂಡಿದ್ದಾರೆ.