ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಟಿ, ಮಾಜಿ ಸಂಸದೆ ರಮ್ಯಾ ಇನ್ನು ದಿಢೀರ್ ಎಂದು ಕೋರ್ಟ್ ಮುಂದೆ ಹಾಜರಾದರು. ರಾಜಕೀಯದಿಂದ ದೂರ ಉಳಿದಿರುವ ನಟಿ ರಮ್ಯಾ ಸಿನಿಮಾದಿಂದಲೂ ದೊಡ್ಡ ಗ್ಯಾಪ್ ಪಡೆದಿದ್ದಾರೆ. ಇದರ ನಡುವೆ ಮತ್ತೆ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವುದಕ್ಕೆ ಕೆಲ ಸಿನಿಮಾಗಳು ಕಾರಣವಾದವು. ಅದರಲ್ಲಿ ಉತ್ತರಕಾಂಡ ಸಿನಿಮಾ ಒಂದು. ಇದಕ್ಕೂ ಮೊದಲು 2021ರಲ್ಲಿ ಬಿಡುಗಡೆಯಾದ ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಹಬ್ಬಿತು. ಇದೆ ವಿಚಾರಕ್ಕೆ ಇಂದು ನಟಿ ರಮ್ಯಾ ಕೋರ್ಟಿಗೆ ಬಂದಿದ್ದರು.
ಈ ಚಿತ್ರದ ಟೀಸರ್ ನಲ್ಲಿ ರಮ್ಯಾ ದೃಶ್ಯ ಇತ್ತು. ಈ ಮೂಲಕ ಸಿನಿಮಾಗೆ ರೀ ಎಂಟ್ರಿ ಕೊಡುತ್ತಿದ್ದಾರೆ ಎಂದು ಅಭಿಮಾನಿಗಳು ಖುಷಿ ಪಟ್ಟರು. ಆದರೆ, ತಮ್ಮ ಅನುಮತಿ ಇಲ್ಲದೆ ಟ್ರೇಲರ್ ನಲ್ಲಿ ತಮ್ಮ ದೃಶ್ಯ ಬಳಸಿದ್ದಾರೆ ಎಂದು ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದರು. ಇದಕ್ಕಾಗಿ 1 ಕೋಟಿ ರೂಪಾಯಿ ಪರಿಹಾರ ಕೇಳಿದ್ದರು. ಚಿತ್ರ ಬಿಡುಗಡೆ ಮಾಡಬಾರದು ಎಂದು ಅರ್ಜಿ ಸಲ್ಲಿಸಿದ್ದರು. ಅಂದು ತುರ್ತು ವಿಚಾರಣೆ ನಡೆಸಿದ ಕೋರ್ಟ್ ರಮ್ಯಾ ಅರ್ಜಿ ವಜಾಗೊಳಿಸಿತು. ಸಿನಿಮಾ ಬಿಡುಗಡೆಯಾಯಿತು. ಈ ಪ್ರಕರಣ ವಿಚಾರಣೆಗಾಗಿ ಇಂದು ವಾಣಿಜ್ಯ ಕೋರ್ಟ್ ಮುಂದೆ ಹಾಜರಾದರು.