ಪ್ರಜಾಸ್ತ್ರ ಸುದ್ದಿ
ನವದೆಹಲಿ(New delhi): ನಟಿ, ಮಾಜಿ ಸಂಸದೆ ರಮ್ಯಾ(actor ramya) ಕ್ರಿಕೆಟ್ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಏಷಿಯಾನೆಟ್ ಚಾನಲ್ ಪ್ರಸಾರ ಮಾಡಿದ ಸುದ್ದಿ ಸಂಬಂಧ, ಕೋರ್ಟ್ ಮೆಟ್ಟಿಲು ಏರಿದ್ದರು. ಚಾನಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಅರ್ಜಿ ಸಲ್ಲಿಸಿದ್ದರು. ಇದನ್ನು ರದ್ದುಪಡಿಸುವಂತೆ ಏಷಿಯಾನೆಟ್ ಚಾನಲ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್(Supreme Court) ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ ಅರ್ಜಿ ತಿರಸ್ಕರಿಸಿದೆ.
ನಟಿ, ಮಾಜಿ ಸಂಸದೆ ರಮ್ಯಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವಂತೆ ಈ ಹಿಂದೆ ಹೈಕೋರ್ಟ್(High Court) ಗೆ ಹೋಗಿದ್ದರು. ಅದನ್ನು ತಿರಸ್ಕರಿಸಿದ ಕೋರ್ಟ್ ವಿಚಾರಣೆ ನಡೆಸುವುದು ಸೂಕ್ತವೆಂದು ಹೇಳಿತ್ತು. ಹೀಗಾಗಿ ಚಾನಲ್ ನವರು ಸುಪ್ರೀಂ ಕೋರ್ಟ್ ಗೆ ಹೋಗಿದ್ದರು. ಸುದ್ದಿ ಪ್ರಸಾರ ಮಾಡಿದ ಸಂದರ್ಭದಲ್ಲಿ ಪದೆಪದೆ ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಫೋಟೋಗಳನ್ನು, ವಿಡಿಯೋಗಳನ್ನು ತೋರಿಸಲಾಗಿದೆ. ಹೀಗಿರುವಾಗ ಅರ್ಜಿ ಹೇಗೆ ರದ್ದುಗೊಳಿಸಬಹುದು ಎಂದು ಕೇಳಲಾಗಿದೆ.
2013, ಮೇ 31ರಂದು ನಟಿ ರಮ್ಯಾ ವಿರುದ್ಧ ಸುದ್ದಿ ವಾಹಿನಿಯಲ್ಲಿ ಕ್ರಿಕೆಟ್(cricket)ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಲಾಗಿತ್ತು. ಇದು ಆಧಾರ ರಹಿತವಾಗಿದೆ. ನನ್ನ ವ್ಯಕ್ತಿತ್ವಕ್ಕೆ, ಸಿನಿಮಾ ರಂಗದಲ್ಲಿ ನನ್ನ ಹೆಸರು ಹಾಳು ಮಾಡುವುದಕ್ಕೆ ಮಾಡಿದ ರೀತಿಯಲ್ಲಿದೆ ಎಂದು ದೂರು ನೀಡಿದ್ದರು. ಏಷಿಯಾನೆಟ್ ಚಾನಲ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವುದರಿಂದ ವಿಚಾರಣೆಯಾಗಿ ನಟಿ ರಮ್ಯಾಗೆ ಜಯ ಸಿಗುತ್ತಾ ಕಾದು ನೋಡಬೇಕು.