ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿನ್ನ ಕಳ್ಳ ಸಾಕಾಣಿಕೆ(Gold Smuggling) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಗೆ ಹಿಂದಿನ ಸರ್ಕಾರದಲ್ಲಿ 12 ಎಕರೆ ಜಮೀನು ಮಂಜೂರು ಆಗಿರುವುದು ಬೆಳಕಿಗೆ ಬಂದಿದೆ. 137ನೇ ರಾಜ್ಯ ಮಟ್ಟದ ಏಕ ವಿಂಡೋ ಕ್ಲಿಯರೆನ್ಸ್ ಸಮಿತಿ, ನಟಿಗೆ ಸಂಬಂಧಿಸಿದ ಮೆಸರ್ಸ್ ಕ್ಸಿರೋಡಾ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಗೆ ತುಮಕೂರು ಜಿಲ್ಲೆ ಸಿರಾ ಕೈಗಾರಿಕಾ ಪ್ರದೇಶದಲ್ಲಿನ ಭೂಮಿಯನ್ನು ಅನುಮೋದಿಸಲಾಗಿದೆಯಂತೆ.
ಕಂಪನಿಯು 138 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಉಕ್ಕಿನ ಟಿಎಂಟಿ ರಾಡ್ ಗಳು, ಬಾರ್ ಗಳು ಹಾಗೂ ಇದಕ್ಕೆ ಸಂಬಂಧಿಸಿದಂತೆ ಉತ್ಪನ್ನಗಳನ್ನು ತಯಾರಿಸುವ ಘಟಕ ಸ್ಥಾಪನೆಯ ಪ್ರಸ್ತಾವನೆ ಸಲ್ಲಿಸಿತ್ತು. ನಟಿಗೆ ಪ್ರಭಾವಿ ರಾಜಕೀಯ ನಾಯಕರ ನಂಟಿದ್ದು, ಇದರಿಂದಲೇ 12 ಎಕರೆ ಭೂಮಿ ಮಂಜೂರು ಆಗಿದೆ ಎಂದು ಹೇಳಲಾಗುತ್ತಿದೆ. ಈಗ ಸರ್ಕಾರದ ಪ್ರಭಾವಿ ರಾಜಕಾರಣಿಯ ಹೆಸರು ಕೇಳಿ ಬರುತ್ತಿದೆ.