ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ರನ್ಯಾ ರಾವ್ ಮದುವೆ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಯಾಕಂದರೆ ಬಾಗಲಕೋಟೆಯ ಜತಿನ್ ಹುಕ್ಕೇರಿಯನ್ನು ಮದುವೆಯಾಗಿರುವ ವಿಚಾರ ನಟಿಯ ಬಂಧನದ ಬಳಿಕವೇ ಗೊತ್ತಾಗಿದೆ. ಈ ಪ್ರಕರಣದಲ್ಲಿ ಪತಿಗೂ ಸಂಕಷ್ಟ ಎದುರಾಗಿದ್ದು, ಕೋರ್ಟ್ ಮುಂದೆ ಹಾಜರಾಗುವ ಪರಿಸ್ಥಿತಿ ಬಂದಿದೆ. ಇದರ ನಡುವೆ ರನ್ಯಾ ರಾವ್ ಹಾಗೂ ಜತಿನ್ ಹುಕ್ಕೇರಿ ಮದುವೆಯಾಗಿ ಒಂದೇ ತಿಂಗಳಲ್ಲಿ ದೂರುವಾಗಿದ್ದಾರಂತೆ.
ಪತ್ನಿಯ ಚಿನ್ನದ ಕಳ್ಳ ಸಾಗಣೆ ಪ್ರಕರಣದಲ್ಲಿ ತಮ್ಮ ಬಂಧನದ ವಿನಾಯಿತಿ ಕೋರಿ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಜತಿನ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದು, ನನ್ನ ಕಕ್ಷಿದಾರ ನವೆಂಬರ್ ನಲ್ಲಿ ರನ್ಯಾರನ್ನು ಮದುವೆಯಾಗಿದ್ದು, ಕೆಲ ಸಮಸ್ಯೆಗಳಿಂದ ಡಿಸೆಂಬರ್ ನಿಂದಲೇ ಅನಧಿಕೃತವಾಗಿ ಬೇರೆಯಾಗಿ ಬದುಕುತ್ತಿದ್ದಾರೆ ಎಂದು ಕೋರ್ಟ್ ಗೆ ತಿಳಿಸಿದ್ದಾರೆ. ಜತಿನಿ ಹುಕ್ಕೇರಿ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿ ಮಾರ್ಚ್ 24ರ ವರೆಗೂ ಇದು ಜಾರಿಯಲ್ಲಿರುತ್ತೆ ಎಂದು ಕೋರ್ಟ್ ಹೇಳಿದೆ. ಕಂದಾಯ ಗುಪ್ತಚರ ನಿರ್ದೇನಾಲಯ ಪರ ವಕೀಲ ಮಧು ರಾವ್ ಮುಂದಿನ ಸೋಮವಾರ ತಮ್ಮ ಆಕ್ಷೇಪಣೆ ಸಲ್ಲಿಸುವುದಾಗಿ ಕೋರ್ಟ್ ಗೆ ತಿಳಿಸಿದ್ದಾರೆ.