ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಟದ ಪ್ರಕರಣಕ್ಕೆ ಇದೀಗ ಇಡಿ ಎಂಟ್ರಿಯಾಗಿದೆ. ಹೀಗಾಗಿ ಬೆಂಗಳೂರಿನ ಸೇರಿದಂತೆ ರಾಜ್ಯ ಹಲವೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ನಟಿ ಮನೆ, ಉದ್ಯಮಿ ತರುಣ್ ರಾಜ್ ಮನೆ, ಜೋತಿಷ್ಯ ಕೇಂದ್ರ ನಡೆಸುತ್ತಿರುವ ಸ್ವಾಮೀಜಿಯೊಬ್ಬರ ಮನೆ, ಕೆಲ ಪೊಲೀಸ್ ಅಧಿಕಾರಿಗಳ ಮನೆ ಹಾಗೂ ವಿಮಾನ ನಿಲ್ದಾಣದ ಕೆಲಸ ಸಿಬ್ಬಂದಿ ಮನೆಗಳಲ್ಲೂ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ದಿನದಿಂದ ದಿನಕ್ಕೆ ನಟಿ ರನ್ಯಾ ಪ್ರಕರಣ ಸಾಕಷ್ಟು ಬಿಗಿಯಾಗುತ್ತಿದೆ. ನಟಿಯೊಂದಿಗೆ ರಾಜಕಾರಣಿಗಳು, ಉದ್ಯಮಿಗಳು, ಸ್ವಾಮೀಜಿಗಳು ಸಂಪರ್ಕವಿದ್ದು, ಇವರೆಲ್ಲರ ನಡುವೆ ಸಾಕಷ್ಟು ಹಣಕಾಸಿನ ವ್ಯವಹಾರ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಹಿಂದೆ ಏನೆಲ್ಲ ಮಾಡಿದ್ದಳೋ ಅದೆಲ್ಲವೂ ಈಗ ಒಂದೊಂದಾಗಿ ಬಯಲಾಗುತ್ತಿದೆ. ಅಲ್ಲಿಗೆ ಮಾಡಬಾರದನ್ನು ಮಾಡಲು ಹೋದ ಕನ್ನಡದ ನಟಿಯೊಬ್ಬಳ ಬದುಕಿನಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ.