ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಟಿ ರನ್ಯಾ ರಾವ್ ಚಿನ್ನ ಕಳ್ಳ ಸಗಾಟ ಪ್ರಕರಣ ಸೇರಿದಂತೆ ಅಕ್ರಮ ಆಸ್ತಿ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಇದರಲ್ಲಿ ರಾಜಕೀಯ ನಾಯಕರ ನಂಟಿನ ಬಗ್ಗೆಯೂ ವರದಿಯಾಗುತ್ತಿದೆ. ಹೀಗಾಗಿ ನಟಿಯ ತಂದೆಯಾಗಿರುವ ಐಪಿಎಸ್(IPS) ಅಧಿಕಾರಿ ರಾಮಚಂದ್ರ ರಾವ್ ಅವರಿಂದ ಅಧಿಕಾರ ಏನಾದರೂ ದುರ್ಬಳಿಕೆಯಾಗಿದೆ ಅನ್ನೋದರ ಕುರಿತು ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳಾದ ಗೌರವ್ ಗುಪ್ತಾ ಅವರನ್ನು ಇದಕ್ಕೆ ನೇಮಿಸಲಾಗಿದೆ.
ಇನ್ನು ಕಲಾಪದಲ್ಲಿ ಭಾಗವಹಿಸಿದ್ದ ಗೃಹ(Home Minister) ಸಚಿವ ಜಿ.ಪರಮೇಶ್ವರ್ ಅವರನ್ನು ಸಿಎಂ ತುರ್ತಾಗಿ ತಮ್ಮ ಕಚೇರಿಗೆ ಕರೆಯಿಸಿಕೊಂಡು ಪ್ರಕರಣದ ಕುರಿತು ಚರ್ಚಿಸಿದರು. ಚಿನ್ನ ಕಳ್ಳಸಾಗಟದಲ್ಲಿ ರಾಜಕೀಯ ನಂಟಿನ ಬಗ್ಗೆ ಕೇಳಿ ಬರುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಏನಾದರೂ ಲೋಪಗಳು ಆಗಿವೆಯಾ ಅನ್ನೋದರ ಮಾಹಿತಿ ಪಡೆದರು. ಈ ಪ್ರಕರಣದಲ್ಲಿ ಗೃಹ ಇಲಾಖೆ ಯಾವೆಲ್ಲ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುವುದರ ಕುರಿತು ಸಹ ತಿಳಿದುಕೊಂಡರು.