ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಸಿದಂತೆ ಕಂದಾಯ ಗುಪ್ತಚರ ನಿರ್ದೇಶನಾಲಯ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಕರ್ನಾಟಕ ಪೊಲೀಸ್ ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ನಟಿ ಈ ವರ್ಷ ಜನವರಿಯಿಂದ 27 ಬಾರಿ ದುಬೈಗೆ ಪ್ರಯಾಣ ಮಾಡಿದ್ದಾರಂತೆ. ಹಿರಿಯ ಐಪಿಎಸ್ ಅಧಿಕಾರಿ ಕೆ.ರಾಮಚಂದ್ರ ರಾವ್ ಅವರ ಮಲಮಗಳು ನಟಿ ರನ್ಯಾ ರಾವ್.
ಇಲ್ಲಿಯವರೆಗೂ ನಡೆದ ಚಿನ್ನ ಕಳ್ಳ ಸಾಗಾಟದಲ್ಲಿ ಪೊಲೀಸ್ ಪ್ರೋಟೋಕಾಲ್ ದುರ್ಬಳಕೆಯಾಗಿದೆ ಅನ್ನೋದು ನಮ್ಮ ಆರೋಪ. ಯಾಕಂದ್ರೆ ರನ್ಯಾ ರಾವ್ ಗ್ರೀನ್ ಚಾನಲ್ ವರೆಗೂ ಬರುವುದು ಅಸಾಧ್ಯ. ಪ್ರೋಟೋಕಾಲ್ ಅಧಿಕಾರಿಗಳನ್ನು ವಿಚಾರಣೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಮಾಡಿದ್ದೇವೆ ಇಬ್ಬರು ಅಧಿಕಾರಿಗಳು ತನಿಖೆಯಲ್ಲಿ ಲೋಪವೆಸಗಿರುವುದನ್ನು ತಿಳಿದು ಬಂದಿದೆ ಅಂತಾ ಡಿಆರ್ ಐ ತಿಳಿಸಿದೆ. ಹೀಗಾಗಿ ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ಹೆಸರುಗಳು ಕೇಳಿ ಬರುತ್ತಿದೆ. ನಟಿ ಶುಕ್ರವಾರ ಜಾಮೀನು ನಿರಾಕರಿಸಲಾಗಿದೆ.