ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ಸೌಥ್ ಸಿನಿಮಾ ದುನಿಯಾದ ಖ್ಯಾತ ನಟಿ ಸಮಂತಾ ಪ್ರಭು ತಂದೆ ಸೋಸೆಫ್(75) ಪ್ರಭು ನಿಧರಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ನಟಿಯಿಂದಾಗಲಿ, ಆಕೆಯ ಕುಟುಂಬಸ್ಥರಿಂದಾಗಲಿ ಅಧಿಕೃತಿ ಮಾಹಿತಿ ಹೊರ ಬಂದಿಲ್ಲ. ನಟಿ ಸಮಂತಾ ತಮ್ಮ ಇನ್ಸ್ಟಾದಲ್ಲಿ ‘Until we meet again dad ಎಂದು ಬರೆದಿದ್ದಾರೆ. ಇದರ ಆಧಾರದ ಮೇಲೆ ವರದಿಯಾಗಿದೆ.
ತಮಿಳುನಾಡಿನ ಪಲ್ಲವರಂ ಮೂಲದ ಜೋಸೆಫ್ ಬ್ರಿಟಿಷ್ ಮೂಲದ ಮಹಿಳೆಯನ್ನು ಮದುವೆಯಾಗಿದ್ದಾರೆ. ಜೋನಾಥನ್, ಡೇವಿಡ್ ಹಾಗೂ ಸಮಂತ ಮೂವರು ಮಕ್ಕಳಿದ್ದಾರೆ. ನಟ ನಾಗಚೈತನ್ಯ ಅವರೊಂದಿಗೆ 2017ರಲ್ಲಿ ಮದುವೆಯಾಗಿದ್ದರು. 2021ರಲ್ಲಿ ಮುರಿದು ಬಿದ್ದಿದೆ. ಅತ್ತ ನಾಗಚೈತನ್ಯ 2ನೇ ಮದುವೆ ಮಾಡಿಕೊಂಡಿದ್ದಾರೆ.