ಪ್ರಜಾಸ್ತ್ರ ಸುದ್ದಿ
ಸಿನಿ ರಂಗದಲ್ಲಿ ಕೌಸ್ಟಿಂಗ್ ಕೌಚ್ ಆಗಾಗ ಸುದ್ದಿಯಾಗುತ್ತಲೇ ಇರುತ್ತೆ. ಖ್ಯಾತಿ ನಟಿಯರು ನೀಡುವ ಹೇಳಿಕೆ ಬಳಿಕ ಚರ್ಚೆಯಾಗುತ್ತೆ. ನಂತರ ತಣ್ಣಗಾಗುತ್ತೆ. ಇದೇ ರೀತಿ ತನಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ನಟಿ ಸಯಾಮಿ ಖೇರ್ ಹೇಳಿದ್ದಾರೆ. ಸಿನಿಮಾದಲ್ಲಿ ಅವಕಾಶ ಪಡೆಯಲು ಹೊಂದಾಣಿಕೆ ಮಾಡಿಕೊಳ್ಳುವಂತೆ ನಿರ್ದೇಶಕರೊಬ್ಬರು ಕೇಳಿದ್ದರು ಎಂದು ಬಾಲಿವುಡ್ ನಟಿ ಹೇಳಿದ್ದಾರೆ.
ತೆಲುಗು ಸಿನಿಮಾದ ಆಫರ್ ವಿಚಾರಕ್ಕೆ ಸಂಬಂಧಿಸಿದಂತೆ ಕಮಿಟ್ ಮೆಂಟ್ ಬಗ್ಗೆ ಹೇಳಿದ್ದಾರೆ. ಇದರಿಂದಾಗಿ ಚಿತ್ರೋದ್ಯಮದ ಬಗ್ಗೆ ನಿರಾಸೆ ಆಯಿತು. ಈ ಬಗ್ಗೆ ನನ್ನ ಆಪ್ತರ ಜೊತೆಗೆ ಹಂಚಿಕೊಂಡಿದ್ದೆ ಎಂದು ನಟಿ ಸಯಾಮಿ ಹೇಳಿದ್ದಾರೆ. ಅಗ್ನಿ, ಮಿರ್ಜಾ, ಫಾದು, 8 ಎಎಂ ಮೆಟ್ರೋ, ಜಾಟ್, ಗೂಮರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿ ಸಯಾಮಿ ಖೇರ್ ನಟಿಸಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುವ ನಟಿಯರು ತಮಗೆ ಆ ರೀತಿ ಕೇಳಿದವರು ಹೆಸರು ಯಾಕೆ ಬಹಿರಂಗ ಪಡಿಸಲ್ಲ ಅನ್ನೋ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.