Ad imageAd image

ಹಿಂಡೆನ್ ಬರ್ಗ್ ಆರೋಪ ತಳ್ಳಿ ಹಾಕಿದ ಅದಾನಿ ಗ್ರೂಪ್, ಸೆಬಿ ಅಧ್ಯಕ್ಷೆ

ಷೇರು ಹಗರಣದಲ್ಲಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ ಅಧ್ಯಕ್ಷೆ ಮಾಧವಿ ಬುಚ್, ಅವರ ಪತಿ ಹಾಗೂ ಅದಾನಿ ಭಾಗಿಯಾಗಿದ್ದಾರೆ

Nagesh Talawar
ಹಿಂಡೆನ್ ಬರ್ಗ್ ಆರೋಪ ತಳ್ಳಿ ಹಾಕಿದ ಅದಾನಿ ಗ್ರೂಪ್, ಸೆಬಿ ಅಧ್ಯಕ್ಷೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಷೇರು ಹಗರಣದಲ್ಲಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ ಅಧ್ಯಕ್ಷೆ ಮಾಧವಿ ಬುಚ್(madhabi puri buch), ಅವರ ಪತಿ ಹಾಗೂ ಅದಾನಿ ಭಾಗಿಯಾಗಿದ್ದಾರೆ ಎಂದು ಅಮೆರಿಕದ ಹಿಂಡೆನ್(Hindenburg) ಬರ್ಗ್ ಆರೋಪಿಸಿದೆ. ಉದ್ಯಮಿ ಗೌತಮ್ ಅದಾನಿ ಗ್ರೂಪ್ ಸಾಗರೋತ್ತರ ಹೂಡಿಕೆಯಲ್ಲಿ ಮಾಧವಿ, ಅವರ ಪತಿ ಪಾಲು ಹೊಂದಿದ್ದಾರೆ. ಇತರ ದೇಶಗಳಲ್ಲಿ ಹೊಂದಿರುವ ಶೆಲ್ ಕಂಪನಿಗಳ ಬಗ್ಗೆ ಶೆಬಿ ತನಿಖೆ ನಡೆಸಲು ಆಸಕ್ತಿ ತೋರಿಸದೆಯಿರುವುದು ಆಚರ್ಯ ಎಂದು ಅಮೆರಿಕದ ಶಾರ್ಟ್ ಶೆಲ್ಲರ್ ಕಂಪನಿ ಹಿಂಡೆನ್ ಬರ್ಗ್ ಆರೋಪಿಸಿದೆ.

ಈ ಆರೋಪವನ್ನು ಅದಾನಿ(Adani) ಗ್ರೂಪ್ ಹಾಗೂ ಸೆಬಿ (SEBI)ಅಧ್ಯಕ್ಷೆ ಮಾಧವಿ ಬುಚ್ ನಿರಾಕರಿಸಿದ್ದಾರೆ. ಆಧಾರ ರಹಿತವಾದ ಆರೋಪಗಳನ್ನು ಮಾಡಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗಿದ್ದು, ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ ಎಂದು ಅದಾನಿ ಗ್ರೂಪ್ ಹೇಳಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. ಹಿಂಡೆನ್ ಬರ್ಗ್ ಶನಿವಾರ ಬಿಡುಗಡೆ ಮಾಡಿರುವ ವರದಿ ಉದ್ಯಮ ವಲಯದಲ್ಲಿ ಸಂಚಲನ ಮೂಡಿಸಿದೆ.

WhatsApp Group Join Now
Telegram Group Join Now
Share This Article