ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯ ಒಕ್ಕೂಟದಿಂದ ಖರೀದಿಸಲಾಗಿದೆ. 16,706 ಕೋಟಿ ರೂಪಾಯಿಗೆ ಆರ್ ಸಿಬಿಯನ್ನು ಖರೀದಿಸಿದೆ. ವಿರಾಲ್ ಪಟೇಲ್ ಸಿಇಒ ಆಗಿರುವ ಬ್ಲ್ಯಾಕ್ ಸ್ಟೋನ್ ಇಕ್ವಿಟ್ ಫರ್ಮ್, ಅಮೆರಿಕ ಮೂಲದ ಡೇವಿಡ್ ಬ್ಲಿಟ್ಜರ್ ಮಾಲೀಕತ್ವದ ಬೋಲ್ಟ್ ವೆಂಚರ್ಸ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಮಾಧ್ಯಮ ಸಮೂಹ ಆರ್ ಸಿಬಿ ಖರೀದಿಸಿದೆ.
ಪುರುಷ ಹಾಗೂ ಮಹಿಳಾ ತಂಡಗಳನ್ನು ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಶೇಕಡ 100ರಷ್ಟು ಪಾಲುದಾರ ಹೊಂದಲು ಸಿದ್ಧವಿದ್ದ ಲಂಡನ್ ಮೂಲದ ಯನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಸಂಸ್ಥೆ ಪ್ರಾಂಚೈಸಿಯಿಂದ ಹಿಂದೆ ಸರಿದಿದೆ. ಇನ್ನು ಕೆಲವೊಂದಿಷ್ಟು ಪ್ರಕ್ರಿಯೆಗಳು ಬಾಕಿ ಉಳಿದಿವೆ.




