Ad imageAd image

ಏರೊ ಇಂಡಿಯಾ ವೈಮಾನ ಪ್ರದರ್ಶನಕ್ಕೆ ಚಾಲನೆ

Nagesh Talawar
ಏರೊ ಇಂಡಿಯಾ ವೈಮಾನ ಪ್ರದರ್ಶನಕ್ಕೆ ಚಾಲನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಏರೊ ಇಂಡಿಯಾ ವೈಮಾನ ಪ್ರದರ್ಶನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಉದ್ಘಾಟನೆ ಮಾಡಿದರು. ಯಲಹಂಕದಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನ ಫೆಬ್ರವರಿ 14ರ ತನಕ ನಡೆಯಲಿದೆ. ದೇಶದ ಅತ್ಯಾಧುನಿಕ ಯುದ್ಧ ವಿಮಾನಗಳು ಭರ್ಜರಿ ಪ್ರದರ್ಶನ ನೀಡಲಿವೆ.

ಈ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪ್ರಯಾಗ್ ರಾಜ್ ನಲ್ಲಿ ಅಧ್ಯಾತ್ಮಿಕ ಕುಂಭಮೇಳ ನಡೆಯುತ್ತಿದೆ. ಬೆಂಗಳೂರಿನಲ್ಲಿ ಏರೊ ಇಂಡಿಯಾ ವೈಮಾನಿಕ ಕುಂಭಮೇಳ ನಡೆಯುತ್ತಿದೆ ಎಂದರು. ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು. ವೈಮಾನಿಕ ಪ್ರದರ್ಶನ ನೋಡಲು ದೇಶದ ಹಲವು ರಾಜ್ಯಗಳ ಜನರು ಇಲ್ಲಿಗೆ ಬರಲಿದ್ದಾರೆ.

WhatsApp Group Join Now
Telegram Group Join Now
Share This Article