ಪ್ರಜಾಸ್ತ್ರ ಸುದ್ದಿ
ಕಾಬೂಲ್(Kabul): ಭೂಕಂಪನಕ್ಕೆ ಅಫ್ಘನಿಸ್ತಾನ್ ಸಂಪೂರ್ಣ ನಲುಗಿದೆ. ಭಾನುವಾರ ರಾತ್ರಿ ಸಂಭವಿಸಿದ ಭೂಕಂಪನಕ್ಕೆ ಬರೋಬ್ಬರಿ 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಫ್ಘನ್ ಪೂರ್ವ ಭಾಗದಲ್ಲಿ 6.0 ತೀವ್ರತೆಯ ಭೂಕಂಪನವಾಗಿದೆ. ಕೇವಲ 8 ಕಿಲೋ ಮೀಟರ್ ಆಳದಲ್ಲಿ ಇದು ಸಂಭವಿಸಿದರುವುದಿಂದ ಇಷ್ಟೊಂದು ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೋಗಿ, ಸೋಕಿ, ನೂರ್ ಗುಲ್ ಜಿಲ್ಲೆಗಳಲ್ಲಿ ಭೂಕಂಪನವಾಗಿದೆ. 600ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, 1,300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದರ ಪರಿಣಾಮ ಪಾಕಿಸ್ತಾನ ಗಡಿ ಭಾಗದ ಕುನಾರ್ ಪ್ರಾಂತ್ಯದಲ್ಲಿಯೂ ಆಗಿದೆ. ಇನ್ನು ಭಾರತದ ದೆಹಲಿಯಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಹೇಳಲಾಗುತ್ತಿದೆ.