ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್(Ahmedabad): ಟಿ-20 ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳು ಕ್ರಿಕೆಟ್ ಪ್ರೇಮಿಗಳಿಗೆ ಕಿಕ್ ನೀಡುತ್ತಿವೆ. ಬುಧವಾರ ಮಧ್ಯಾಹ್ನ ನಡೆದ ಅಫ್ಗಾನಿಸ್ತಾನ್ ಹಾಗೂ ಸೌಥ್ ಆಫ್ರಿಕಾ ನಡುವಿನ ಪಂದ್ಯ ಅತ್ಯಂತ ರೋಚಕದಿಂದ ಕೂಡಿತ್ತು. ಎರಡು ಸೂಪರ್ ಓವರ್ ಆಡಿಸಲಾಗಿದ್ದು, ಅಂತಿಮವಾಗಿ ಸೌಥ್ ಆಫ್ರಿಕಾ ಗೆಲುವು ದಾಖಲಿಸಿದೆ.
ಟಾಸ್ ಸೋತಿದ್ದ ಆಫ್ರಿಕಾ ಪಡೆಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಲಾಯಿತು. ಡಿ ಕಾಕ್ 59 ರನ್, ರಿಕೆಲ್ಟನ್ 61 ರನ್ ನಿಂದಾಗಿ 6 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಈ ಸವಾಲಿನ ಗುರಿ ಬೆನ್ನು ಹತ್ತಿದ ಅಫ್ಗಾನಿಸ್ತಾನ್ ತಂಡದ ಗುರ್ಬಾಜ್ 42 ಬೌಲ್ ಗಳಲ್ಲಿ 84 ರನ್ ಗಳಿಸಿ ಟೀಂಗೆ ಆಸರೆಯಾದರು. 3 ಎಸೆತಗಳಲ್ಲಿ 1 ರನ್ ಬೇಕಿತ್ತು. ಆದರೆ, ಫಾರೂಕಿ ರನ್ ಔಟ್ ಆಗುವುದರೊಂದಿಗೆ ಪಂದ್ಯ ಟೈ ಆಯಿತು. ಹೀಗಾಗಿ ಸೂಪರ್ ಓವರ್ ಆಡಿಸಲಾಯಿತು.
ಮೊದಲ ಸೂಪರ್ ಓವರ್ ನಲ್ಲಿ ಅಫ್ಗಾನಿಸ್ತಾನ್ 17 ರನ್ ಗಳಿಸಿತು. ದಕ್ಷಿಣ ಆಫ್ರಿಕಾ ಸಹ 17 ರನ್ ಗಳಿಸಿತು. ಹೀಗಾಗಿ 2ನೇ ಸೂಪರ್ ಆಡಿಸಲಾಯಿತು. ಆಗ ಆಫ್ರಿಕಾದ ಮಿಲ್ಲರ್ 4 ಬೌಲ್ ಗಳಲ್ಲಿ 2 ಸಿಕ್ಸ್ ಸೇರಿ 16 ರನ್ ಗಳಿಸಿದರು. ಒಟ್ಟು 23 ರನ್ ಕಲೆ ಹಾಕಿತು. ಬಳಿಕ ಅಫ್ಗನ್ ಬ್ಯಾಟ್ ಮಾಡಿತು. 2ನೇ ಬೌಲ್ ನಲ್ಲಿ ನಬಿ ವಿಕೆಟ್ ಬಿತ್ತು. ಆದ್ರೆ ಮಹಾರಾಜ ಬೌಲಿಂಗ್ ನಲ್ಲಿ ಗುರ್ಬಾಜ್ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದರು. ಹೀಗಾಗಿ ಪಂದ್ಯ ತೀವ್ರ ಕುತೂಹಲ ಮೂಡಿಸಿತು. ಕೊನೆಯ ಎಸೆತದಲ್ಲಿ ಗುರ್ಬಾಜ್ ಮಿಲ್ಲರ್ ಗೆ ಕ್ಯಾಚ್ ನೀಡಿದರು. ಹೀಗಾಗಿ 4 ರನ್ ಗಳಿಂದ ಸೋಲು ಕಂಡಿತು.




