ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು(Chikkamagaloru): ಮದ್ಯದ ಅಮಲಿನಲ್ಲಿ ಏನೆಲ್ಲ ದುರಂತಗಳು ನಡೆಯುತ್ತಿವೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಸಣ್ಣದೊಂದು ಬುದ್ದಿ ಮಾತು ಸಹ ಆಗ ದೊಡ್ಡ ಅಪರಾಧದಂತೆ ಕಾಣಿಸುತ್ತೆ. ಹೀಗಾಗಿ ಆಗ ಮಾಡಬಾರದ ಕೆಲಸಗಳನ್ನು ಮಾಡಿ ಜೀವ, ಜೀವನ ಹಾಳು ಮಾಡಿಕೊಂಡು ಬಿಡುತ್ತಾರೆ. ಅತಿಯಾಗಿ ಕುಡಿದು ಬಂದು ಮಗಳೊಂದಿಗೆ ಜಗಳ ಮಾಡುತ್ತಿದ್ದ ಅಳಿಯನಿಗೆ ಬುದ್ದಿ ಹೇಳಿದ ಅತ್ತೆಯನ್ನು ಕೊಂದ ಘಟನೆ ಜಿಲ್ಲೆಯ ಮೂಡಿಗೆರೆಯ ಭಾರತಿಬೈಲು ಗ್ರಾಮದಲ್ಲಿ ನಡೆದಿದೆ. ಯಮುನಾ(65) ಎನ್ನುವ ಮಹಿಳೆಯ ಕೊಲೆಯಾಗಿದೆ. ಅಳಿಯ ಶಶಿಧರ್ ಕೊಲೆಯ ಆರೋಪಿ.
ಯಮುನಾ ಕಾಫಿ ತೋಟದ ಕೆಲಸವೆಂದು ಮಗಳ ಮನೆಗೆ ಹೋಗಿದ್ದಾಳೆ. ಆಗ ಮಗಳು ಗಂಡ ಕುಡಿದು ಬಂದು ಗಲಾಟೆ ಮಾಡುವುದನ್ನು ಹೇಳಿದ್ದಾಳೆ. ಹೀಗಾಗಿ ಅಳಿಯ ಶಶಿಧರಗೆ ಅತ್ತೆ ಬುದ್ದಿವಾದ ಹೇಳಿದ್ದಕ್ಕೆ ಕುಡಿದ ಮತ್ತಲ್ಲಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನಂತೆ. ಆಗ ತಾನು ಮಾಡಿದ ಕೆಲಸ ಎಂಥದ್ದು ಅನ್ನೋದು ಗಮನಕ್ಕೆ ಬಂದಿಲ್ಲ. ಅಮಲು ಇಳಿದ ಮೇಲೆ ಗೊತ್ತಾಗಿ ಬಂಧನದ ಭಯದಲ್ಲಿ ಕಾಫಿ ತೋಟದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅತ್ತ ತಾಯಿ, ಇತ್ತ ಪತಿ ಸಾವಿನಿಂದ ಮಗಳು ಕಂಗಾಲಾಗಿದ್ದಾಳೆ. ಅತಿಯಾದ ಕುಡಿತು ಇಬ್ಬರ ಜೀವಗಳನ್ನು ಬಲಿ ಪಡೆದಿದೆ.