ಪ್ರಜಾಸ್ತ್ರ ಸುದ್ದಿ
ಚಿಕ್ಕೋಡಿ(Chikkodi): ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ತೆರೆಮರೆಯ ಕಸರತ್ತು ನಡೆದಿದೆ ಅನ್ನೋ ಮಾತುಗಳು ಕೇಳಿ ಬರುತ್ತಲೇ ಇವೆ. ಇದರಲ್ಲಿರುವ ಮೊದಲ ಹೆಸರು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್. ಇದೆಲ್ಲದರ ನಡುವೆ ಎಂಎಲ್ಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಅವರು ಆಡಿದ ಮಾತುಗಳು ಇದೀಗ ಸಖತ್ ಸದ್ದು ಮಾಡುತ್ತಿವೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಪ್ಪಲಗುದ್ದಿಯಲ್ಲಿ ಮಾತನಾಡಿದ ಯತೀಂದ್ರ, ನಮ್ಮ ತಂದೆಯವರು ರಾಜಕೀಯ ಕೊನೆ ಘಟ್ಟದಲ್ಲಿದ್ದಾರೆ. ವೈಚಾರಿಕವಾಗಿ, ಸೈದ್ಧಾಂತಿಕ ಮಾರ್ಗದರ್ಶನ ಮಾಡುವುದಕ್ಕೆ, ನೇತೃತ್ವ ವಹಿಸಿಕೊಳ್ಳುವುದಕ್ಕೆ ನಾಯಕರು ಬೇಕು. ಜಾರಕಿಹೊಳಿಯವರು ಅಂತಹದೊಂದು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂದಿದ್ದಾರೆ.
ಯತೀಂದ್ರಯವರ ಮಾತುಗಳಿಂದ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮುಂದಿನ ಕನಸು ಮುಖ್ಯಮಂತ್ರಿಯಾಗುವುದು. ಈಗ ಅವರ ಕನಸಿಗೆ ತಣ್ಣೀರು ಎರಚುವಂತೆ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಸಿಎಂ, ಡಿಸಿಎಂ ಸೇರಿದಂತೆ ಸಿಎಂ ರೇಸಿನಲ್ಲಿರುವ ಸಚಿವರು ಏನಂತರೆ ಕಾದು ನೋಡಬೇಕಿದೆ.