ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ, ಎ2 ಆರೋಪಿ ನಟ ದರ್ಶನ್, ಎ6 ಜಗದೀಶ್, ಎ7 ಅನುಕುಮಾರ್, ಎ12 ಲಕ್ಷ್ಮಣ, ಎ11 ನಾಗರಾಜ್ ಎ14 ಪ್ರದೋಶಗೆ ಹೈಕೋರ್ಟ್ ಜಾಮೀನು ನೀಡಿದೆ. ಕಳೆದ ಶುಕ್ರವಾರ ಹೈಕೋರ್ಟ್ ನಿಯಮಿತ ಜಾಮೀನು ಮಂಜೂರು ಮಾಡಿದೆ. ಆದರೆ, ಶನಿವಾರ ಹಾಗೂ ಭಾನುವಾರ ರಜೆಯ ಹಿನ್ನಲೆಯಲ್ಲಿ ಈಗಾಗ್ಲೇ ಹೊರಗೆ ಇರುವ ದರ್ಶನ್ ಹೊರುತು ಪಡಿಸಿ ಉಳಿದ 6 ಆರೋಪಿಗಳು ಬಿಡುಗಡೆಯಾಗಿರಲಿಲ್ಲ. ಇಂದು ಸೆಷನ್ಸ್ ಕೋರ್ಟ್ ಮುಂದೆ ಜಾಮೀನು ಪ್ರಕ್ರಿಯೆ ಮುಗಿಸಿಕೊಂಡು ಒಬ್ಬೊಬ್ಬರೆ ಹೊರಗೆ ಬರುತ್ತಿದ್ದಾರೆ.
ಜೂನ್ 11ರಂದು ನಟ ದರ್ಶನ್ ಬಂಧನವಾಗಿದೆ. ಅಲ್ಲಿಂದ ಪರಪ್ಪನ ಅಗ್ರಹಾರ, ಬಳ್ಳಾರಿಯ ಸೆಂಟ್ರಿಲ್ ಜೈಲಿನಲ್ಲಿದ್ದರು. ಅಕ್ಟೋಬರ್ 30ರಂದು ವೈದ್ಯಕೀಯ ಕಾರಣಕ್ಕೆ 6 ವಾರಗಳ ಮಧ್ಯಂತರ ಜಾಮೀನು ನೀಡಲಾಗಿತ್ತು. ಡಿಸೆಂಬರ್ 11ಕ್ಕೆ ಅದು ಮುಗಿಯಿತು. ಆದರೆ, ಅದಕ್ಕೂ ಮೊದಲು ನಡೆದ ವಿಚಾರಣೆಯಲ್ಲಿ ದರ್ಶನ್ ಪರ ವಕೀಲರು ಚಿಕಿತ್ಸೆ ಕಾರಣಕ್ಕೆ ಜಾಮೀನು ವಿಸ್ತರಣೆಗೆ ಕೂರಿದ್ದರು. ಅದರಂತೆ ವಿಸ್ತರಣೆ ಮಾಡಲಾಗಿತ್ತು. ಇನ್ನು ಡಿಸೆಂಬರ್ 13ರಂದು ದರ್ಶನ್, ಪವಿತ್ರಾಗೌಡ ಸೇರಿ 7 ಆರೋಪಿಗಳಿಗೆ ನಿಯಮಿತ ಜಾಮೀನು ನೀಡಿದೆ.
ಇಂದು ನಟ ದರ್ಶಣ್ ಬಿಜಿಎಸ್ ಆಸ್ಪತ್ರೆಯಿಂದ ನೇರವಾಗಿ ಕೋರ್ಟ್ ಗೆ ಬಂದು ಜಾಮೀನು ಪ್ರಕ್ರಿಯೆ ಮುಗಿಸಿಕೊಂಡರು. ದರ್ಶನಗೆ ಪಾಸ್ ಪಾರ್ಟ್ ವಾಪಸ್ ಕೊಡಬೇಕು ಎಂದು ಕೋರ್ಟ್ ಹೇಳಿದ್ದರಿಂದ ಅದನ್ನು ಪಡೆದರು. ಸಹೋದರ ದಿನಕರ್, ನಟ ಧನ್ವೀರ್ ಶ್ಯೂರಿಟಿ ನೀಡಿದರು. ಈ ಪ್ರಕ್ರಿಯೆಗಳ ಕಾರಣಕ್ಕೆ ಆಸ್ಪತ್ರೆಯಿಂದ ಸೆಷನ್ಸ್ ಕೋರ್ಟ್ ನತ್ತ ಬಂದರೆ ಕೆಲ ದೃಶ್ಯ ಮಾಧ್ಯಮಗಳ ಮತ್ತೆ ದರ್ಶನ್ ವಿರುದ್ಧ ಸುಳ್ಳು ಸುದ್ದಿಯನ್ನು ಗಂಟಲು ಹರಿದುಕೊಂಡು ಹೇಳಿದ್ವು. ನಿಯಮತ ಜಾಮೀನು ಸಿಕ್ಕಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಮನೆಗೆ ಹೊರಟ್ಟಿದ್ದಾರೆ. ನಮ್ಮಲ್ಲಿಯೇ ನೇರ ದೃಶ್ಯಗಳು. ಕಳೆದ ಒಂದೂವರೆ ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದವರು ಈಗ ಡಿಸ್ಚಾರ್ಜ್ ಆಗಿದ್ದಾರೆ. ಪಿಸಿಯೋಥೆರಪಿ ಮಾಡಿಸಿಕೊಂಡು ಕಾಲ ಕಳೆಯುತ್ತಿದ್ದರು ಅಂತೆಲ್ಲ ಅಬ್ಬರಿಸಿದರು. ವಾಸ್ತವದಲ್ಲಿ ದರ್ಶನ್ ಸೆಷನ್ಸ್ ಕೋರ್ಟ್ ಗೆ ಬಂದು ನಿಯಮಿತ ಜಾಮೀನು ಪ್ರಕ್ರಿಯೆ ಮುಗಿಸಿಕೊಂಡು ವಾಪಸ್ ಆಸ್ಪತ್ರೆಗೆ ಹೋದರು.
ಕೆಲ ದೃಶ್ಯ ಮಾಧ್ಯಗಳು ಅದ್ಯಾಕೆ ಹಿಂಗೆ ಆಡ್ತಿವೆ ಎನ್ನುವುದು ಜನರಿಗೆ ತಿಳಿಯದಾಗಿದೆ. ಒಂದು ಐದು ನಿಮಿಷ ಸುದ್ದಿ ಕೊಡುವುದು ತಡವಾಗಲಿ. ಆದರೆ, ತಪ್ಪು ತಪ್ಪು ಮಾಹಿತಿ ಕೊಟ್ಟು ಜನರಲ್ಲಿ ಇಲ್ಲ ಸಲ್ಲದ ಗೊಂದಲ ಸೃಷ್ಟಿಸುವುದು. ಬಾಯಿ ಚಪಲ ತೀರಿಸಿಕೊಳ್ಳುವುದು ಯಾಕೆ ಮಾಡುವುದು? ದರ್ಶನಗೆ ನಿಯಮಿತ ಜಾಮೀನು ಸಿಕ್ಕಿದ್ದರೂ ಈ ಮೊದಲು ವೈದ್ಯಕೀಯ ಕಾರಣಕ್ಕೆ ಪಡೆದಿದ್ದ ಜಾಮೀನು ವಿಚಾರ ಇದರಲ್ಲಿ ಸೇರಿಕೊಂಡರೂ ಅವರ ಚಿಕಿತ್ಸೆ ಪಡೆಯಬೇಕು. ಶಸ್ತ್ರಚಿಕಿತ್ಸೆ ಪಡೆದು ಅದರ ವರದಿ ಕೋರ್ಟ್ ಗೆ ಸಲ್ಲಿಸಲೇಬೇಕು. ಇಲ್ಲದೆ ಹೋದರೆ ಜಾಮೀನು ರದ್ದಾಗಿ ಮತ್ತೆ ಜೈಲಿಗೆ ಹೋಗಬೇಕಾಗುತ್ತೆ. ಇದು ಅವರ ವಕೀಲರಿಗೆ ಗೊತ್ತಿರುವುದಿಲ್ಲವೇ? ಇದು ಗೊತ್ತಿದ್ದೂ ಸಹ ಶಸ್ತ್ರಚಿಕಿತ್ಸೆ ಪಡೆಯದೆ ಮನೆಗೆ ಹೊರಟಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಲಕ್ವಾ ಹೊಡೆಯುತ್ತೆ ಎಂದೆಲ್ಲ ನಾಟಕ ಮಾಡಿದ್ದಾರೆ ಎಂದು ಸುದ್ದಿ ಪ್ರಸಾರ ಮಾಡಿದ ಕೆಲ ದೃಶ್ಯ ಮಾಧ್ಯಮಗಳು ಮತ್ತೆ ಜನರ ಮುಂದೆ ನಗೆಪಾಟೀಲಿಗೆ ಈಡಾಗಿವೆ.