ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್(Ahmedabad): ಗುಜರಾತಿನ ಅಹಮದಾಬಾದ್ ನಲ್ಲಿ ಮಹಾದುರಂತವೊಂದು ನಡೆದಿದೆ. ಏರ್ ಇಂಡಿಯಾ ವಿಮಾನ ಎಐ-171 ವಿಮಾನ ಪತನಗೊಂಡಿದೆ. ನಗರದ ಬಿಜೆ ವೈದ್ಯಕೀಯ ಕಾಲೇಜಿನ ವೈದ್ಯರ ವಸತಿ ಕಟ್ಟಡದ ಮೇಲೆ ಪತನಗೊಂಡಿದೆ. ಇದರಿಂದಾಗಿ ಬರೋಬ್ಬರಿ 242 ಜನರು ಮೃತಪಟ್ಟಿದ್ದಾರೆ. ಅಲ್ಲದೇ ಕಟ್ಟಡದಲ್ಲಿದ್ದ ಐವರು ವಿದ್ಯಾರ್ಥಿಗಳು ಸಹ ಮೃತಪಟ್ಟಿದ್ದಾರೆ.
ಐದು ಮಹಡಿಗಳ ಕಟ್ಟಡದ ಮೇಲೆ ವಿಮಾನ ಬಿದ್ದಿದೆ. ಅಪಾರ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕಟ್ಟಡ ಹಾನಿಯಾಗಿದೆ. ಅಲ್ಲಿದ್ದ ಹಲವು ಕಾರುಗಳ ಮೇಲೆ ಬೆಂಕಿ ಬಿದ್ದು ಅವುಗಳು ಸಹ ಸುಟ್ಟು ಹೋಗಿವೆಯಂತೆ. 10 ಸಿಬ್ಬಂದಿ ಸೇರಿ 242 ಜನರಿದ್ದರು. ಅಹಮದಾಬಾದ್ ನಿಂದ ಲಂಡನ್ ಗೆ ಪ್ರಯಾಣ ಬೆಳೆಸಿತ್ತು. ಆದರೆ ಏಕಾಏಕಿ ವಿಮಾನ ಕೆಳಕ್ಕೆ ಚಲಾಯಿಸಿದೆ. ನೋಡು ನೋಡುತ್ತಿದ್ದಂತೆ ಕಟ್ಟಡದ ಮೇಲೆ ಬಿದ್ದಿದೆ. ಈ ದುರಂತಕ್ಕೆ ಇಡೀ ದೇಶದ ಜನತೆ ಬೆಚ್ಚಿ ಬಿದ್ದಿದೆ. ಎಲ್ಲರೂ ಸಂತಾಪ ಸೂಚಿಸಿದ್ದಾರೆ.