ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಹಲವಾರು ಅಪರಾಧಿ ಕೃತ್ಯಗಳಲ್ಲಿ ಭಾಗವಹಿಸಿ ಜಾಮೀನು ಮೇಲೆ ಹೊರಗೆ ಹೋಗಿದ್ದ ದರೋಡೆಕೋರನೊಬ್ಬ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ದರೋಡೆ ಪ್ರಕರಣದ ವಿಚಾರಣೆ ಹಂತದಲ್ಲಿ ನೋಟಿಸ್ ಕಳಿಸಿದ್ದರೂ ಕೋರ್ಟ್ ಗೆ ಹಾಜರಾಗದೆ ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ. ಇಂತಹ ಆಸಾಮಿ ಎಐ ಕ್ಯಾಮೆರಾ ಸಹಾಯದಿಂದ ಲಾಕ್ ಆಗಿದ್ದಾನೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅಣ್ಣನನ್ನು ನೋಡಲು ಬಂದ ಅಪ್ರೋಜ್ ಪಾಷಾ ಎನ್ನುವ ದರೋಡೆಕೋರ ಸಿಕ್ಕಿಬಿದ್ದಿದ್ದಾನೆ.
ಕಳೆದ 10 ವರ್ಷಗಳ ಹಿಂದೆ ಡಕಾಯಿತಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಅಪ್ರೋಜ್ ಪಾಷಾ ಮುಂದೆ ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಪ್ರಕರಣದ ಟ್ರಯಲ್ ಕೋರ್ಟ್ ನಲ್ಲಿ ನಡೆಯುತಿತ್ತು. ಆದರೆ ಈತ ಮಾತ್ರ ತಲೆ ಮರೆಸಿಕೊಂಡು ತಿರುಗುತ್ತಿದ್ದ. ಬಂಧನಕ್ಕೆ ವಾರೆಂಟ್ ಸಹ ಹೊರಡಿಸಲಾಗಿತ್ತು. ಇಂತಹ ಕಿಲಾಡಿ ಇಂದಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(AI) ಕ್ಯಾಮೆರಾದ ಸಹಾಯದಿಂದ ಸಿಕ್ಕಿಬಿದ್ದಿದ್ದಾನೆ.