ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ, ಎ2 ಆರೋಪಿ ನಟ ದರ್ಶನ್ ಸೇರಿದಂತೆ ಎಲ್ಲ 17 ಆರೋಪಿಗಳು ಶುಕ್ರವಾರ ಕೋರ್ಟ್ ಮುಂದೆ ಹಾಜರಾದರು. ನಿಯಮಿತ ಜಾಮೀನು ದೊರೆತ ಬಳಿಕ ಇದು ಮೊದಲ ಕೋರ್ಟ್ ಹಾಜರು ಆಗಿದೆ. 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಆರೋಪಿಗಳು ಹಾಜರಾದರು.
ನಟ ದರ್ಶನ್ ಜೊತೆಗೆ ನಟ ಧನ್ವೀರ್ ಹಾಗೂ ವಕೀಲರು ಬಂದರು. ಈ ವೇಳೆ ಅಭಿಮಾನಿಗಳು ಸೇರಿದ್ದರು. ಎಲ್ಲ ಆರೋಪಿಗಳು ಬಂದ ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ಹಾಜರಿ ಪಡೆದುಕೊಂಡ ಬಳಿಕ ಪ್ರಕರಣವನ್ನು ಫೆಬ್ರವರಿ 25ಕ್ಕೆ ಮುಂದೂಡಲಾಯಿತು. ನಿಯಮಿತ ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಿರುವ ಷರತ್ತುಗಳಲ್ಲಿ ಪ್ರತಿ ತಿಂಗಳು ಕೋರ್ಟ್ ಗೆ ಹಾಜರಾಗಬೇಕು ಎನ್ನುವುದು ಸೇರಿದೆ. ಹೀಗಾಗಿ ಇಂದು ಆರೋಪಿಗಳೆಲ್ಲ ಹಾಜರಾದರು.