Ad imageAd image

ಎಲ್ಲವೂ ಬಿಜೆಪಿ ಕಾಲದಲ್ಲಿ ನಡೆದ ಹಗರಣಗಳು: ಡಿಸಿಎಂ ಡಿಕೆಶಿ

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ(KPCC) ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಯೂಥ್ ಕಾಂಗ್ರೆಸ್ ವಿಭಾಗಕ್ಕೆ ಸೇರಲು ಇವತ್ತಿನಿಂದ ಚಾಲನೆ ನೀಡಲಾಗಿದೆ.

Nagesh Talawar
ಎಲ್ಲವೂ ಬಿಜೆಪಿ ಕಾಲದಲ್ಲಿ ನಡೆದ ಹಗರಣಗಳು: ಡಿಸಿಎಂ ಡಿಕೆಶಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ(KPCC) ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumara), ಯೂಥ್ ಕಾಂಗ್ರೆಸ್ ವಿಭಾಗಕ್ಕೆ ಸೇರಲು ಇವತ್ತಿನಿಂದ ಚಾಲನೆ ನೀಡಲಾಗಿದೆ. ಆನ್ಲೈನ್ ಮೂಲಕ ನೇರವಾಗಿ ಸದಸ್ಯತ್ವ ಪಡೆಯಬಹುದು. ರಾಹುಲ್ ಗಾಂಧಿ(Rahul Gandhi) ಅವರ ಮಾರ್ಗದರ್ಶನದ ಮೂಲಕ ಯುವ ಘಟಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಸದಸ್ಯತ್ವ ಹೊಂದುವ ಕೆಲಸ ಮಾಡಲಾಗುತ್ತಿದೆ. ಬೂತ್ ಮಟ್ಟದಿಂದಲೇ ಚುನಾವಣೆ ಮಾಡಿ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂದರು. ಇದೇ ವೇಳೆ ಮಾಧ್ಯಮದವರು ಮುಡಾ ಪ್ರಕರಣ ಸಂಬಂಧ ಬಿಜೆಪಿ-ಜೆಡಿಎಸ್(BJP-JDS) ನಾಯಕರು ಮೈಸೂರಿನವರೆಗೆ ಪಾದಯಾತ್ರೆ ನಡೆಸಲು ಸಿದ್ಧವಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತಿರಿಸದ ಅವರು, ಅವರೆ ತೋಡಿದ ಬಾವಿಗೆ ಅವರು ಬೀಳಲು ಹೊರಟಿದ್ದಾರೆ.

ಎಸ್ಐಟಿ(SIT) ತನಿಖೆ ನಡೆಯುತ್ತಿದೆ. ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಾದ ಬಳಿಕ ತನಿಖೆಗೆ ಎಸ್ಐಟಿಗೆ ಕೊಟ್ಟಿದ್ದೇವೆ. ಆದರೆ, ಅವರು ಪ್ರಚಾರ ಪಡೆಯಲು ಬೇರೆ ಬೇರೆಯವರ ಹೆಸರು ತಗೊಂಡು ಹೊರಟಿದ್ದಾರೆ. ನಾವು ಮುಕ್ತವಾಗಿ ಚರ್ಚೆಗೆ ಅವಕಾಶ ಮಾಡಿಕೊಟ್ಟೇವು. ಆರ್.ಅಶೋಕ್, ರವಿ ಸೇರಿ ಅವರು ಮಾತನಾಡುವಾಗಿ ಬಿಟ್ಟಿದ್ದೀವಿ. ಆದರೆ, ನಾವು ಉತ್ತರ ಕೊಡುವಾಗ ನಮಗೆ ಬಿಡಲಿಲ್ಲ. ಯಡಿಯೂರಪ್ಪ(BSY), ಬೊಮ್ಮಾಯಿ(Bommai) ಇದ್ದ ಕಾಲದಲ್ಲಿ ಹಗರಣ ನಡೆದ ಬಗ್ಗೆ ಸಿಐಜಿ ವರದಿಗಳಿವೆ. ಇದನ್ನು ಹೇಳಬೇಕು ಅಂದರೆ ನಮಗೆ ಅವಕಾಶನೆ ಕೊಡಲಿಲ್ಲ. ಮುಡಾ(MUDA), ವಾಲ್ಮೀಕಿ(Valmiki) ಹಗರಣ ನಡೆದಿದೆ ಎಂದು ಪ್ರಚಾರ ಪಡೆಯಲು ಹೊರಟಿದ್ದಾರೆ. ಅವರ ಕಾಲದಲ್ಲಿ ನಡೆದ ಎಲ್ಲ ಹಗರಣಗಳಿವು. ಅದಕ್ಕೆ ಅವರು ಪಾದಯಾತ್ರೆ ಮಾಡಲು ಹೊರಟಿದ್ದಾರೆ. ನಾವು ಅವರ ಕಾಲದಲ್ಲಿ ಯಾರೆಲ್ಲ ಎಷ್ಟು ಸೈಟ್ ತೆಗೆದುಕೊಂಡಿದ್ದಾರೆ. ಏನು ಮಾಡಿದ್ದಾರೆ ಎಲ್ಲವೂ ಹೇಳುತ್ತೇವೆ.

WhatsApp Group Join Now
Telegram Group Join Now
Share This Article