ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಪಿಎಸ್ಐನಿಂದಲೇ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಹಳೇ ಹುಬ್ಬಳ್ಳಿ ಠಾಣೆ ಪಿಎಸ್ಐ ಸುರೇಶ್ ಯಳ್ಳೂರು ವಿರುದ್ಧ ಮಹಿಳಾ ಪೇದೆಗಳು ಇಂತಹದೊಂದು ಆರೋಪ ಮಾಡಿದ್ದು, ಈ ಸಂಬಂಧ ಸಿಎಂ, ಗೃಹ ಸಚಿವರು, ಮಹಿಳಾ ಆಯೋಗ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ 3 ಪುಟುಗಳ ದೂರು ಸಲ್ಲಿಸಿದ್ದಾರಂತೆ.
ರಾತ್ರಿಯಾದರೆ ವಿಡಿಯೋ ಕಾಲ್ ಮಾಡುವುದು. ಕೆಟ್ಟದಾಗಿ ಮಾತನಾಡುವುದು. ರಜೆ ಕೇಳಲು ಹೋದ ಸಂದರ್ಭದಲ್ಲಿ ಅಸಭ್ಯವಾಗಿ ವರ್ತಿಸುವುದು ಮಾಡುತ್ತಾರೆ. ಇದರಿಂದಾಗಿ ನಮ್ಮ ಕುಟುಂಬದಲ್ಲಿ ಸಮಸ್ಯೆಯಾಗುತ್ತಿದೆ. ಇದರಿಂದ ನಮಗೆ ರಕ್ಷಣೆ ಕೊಡಿ ಎಂದು ಮಹಿಳಾ ಪೇದೆಗಳು ಮನವಿ ಸಲ್ಲಿಸಿದ್ದಾರಂತೆ. ಸಮಾಜಕ್ಕೆ ರಕ್ಷಣೆ ಕೊಡಬೇಕಾದವರಿಂದಲೇ ಇಂತಹ ಕೃತ್ಯಗಳು ನಡೆಯುತ್ತಿರುವುದು ನಿಜಕ್ಕೂ ನೋವಿನ ಸಂಗತಿ.