Ad imageAd image

ಭೂಲೋಕದಲ್ಲೇ ನಮಗೆ ಸ್ವರ್ಗ ಕೊಟ್ಟಿದ್ದು ಅಂಬೇಡ್ಕರ್: ಎಂ.ಎ ಸಿಂದಗಿಕರ

Nagesh Talawar
ಭೂಲೋಕದಲ್ಲೇ ನಮಗೆ ಸ್ವರ್ಗ ಕೊಟ್ಟಿದ್ದು ಅಂಬೇಡ್ಕರ್: ಎಂ.ಎ ಸಿಂದಗಿಕರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ದಲಿತ ಸೇನೆ ಹಾಗೂ ಎಸ್ ಡಿಪಿಐ ಸದಸ್ಯರು ಜಂಟಿಯಾಗಿ ಶುಕ್ರವಾರ ಪ್ರತಿಭಟನೆ ನಡೆಸಿದರು. ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಅಂಬೇಡ್ಕರ್ ಪರವಾಗಿ ಜೈಕಾರ ಹಾಕಿ, ಅಮಿತ್ ಶಾ ವಿರುದ್ಧ ಆಕ್ರೋಶ ಹೊರ ಹಾಕಿದರು.

ಈ ವೇಳೆ ಮಾತನಾಡಿದ ದಲಿತ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಎಂ.ಎ ಸಿಂದಗಿಕರ, ಶೋಷಿತ ಸಮಾಜದ ಧ್ವನಿಯಾಗಿರುವ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅಂಬೇಡ್ಕರ್ ಎನ್ನುವುದು ಫ್ಯಾಷನ್ ಆಗಿದೆ ಅಂತಾರೆ. ನಮಗೆ ಸ್ವರ್ಗ ಬೇಕಾಗಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ಭೂಲೋಕದಲ್ಲಿ ಸ್ವರ್ಗ ಕೊಟ್ಟಿದ್ದಾರೆ. ಸಾವಿರಾರು ವರ್ಷಗಳಿಂದ ಹಿಂದೂಳಿದವರನ್ನು, ದಲಿತರನ್ನು, ಮುಸ್ಲಿಂರನ್ನು ಮೇಲ್ವರ್ಗದವರು ಕೀಳಾಗಿ ನೋಡುತ್ತಿದ್ದರು. ಆದರೆ, ಅಂಬೇಡ್ಕರ್ ಅವರ ಕೊಟ್ಟ ಸಂವಿಧಾನದಿಂದ ನಾವು ವಿದ್ಯಾವಂತರಾಗಿದ್ದೇವೆ. ರಾಜಕೀಯವಾಗಿ, ಸಂಘಟನಾತ್ಮಕವಾಗಿ ಉನ್ನತ ಸ್ಥಾನದಲ್ಲಿದ್ದೇವೆ. ಇಂತಹ ಮಹಾನ್ ನಾಯಕನ ಬಗ್ಗೆ ಹಗುರವಾಗಿ ಮಾತನಾಡಿರುವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಪುರಸಭೆ ಸದಸ್ಯ ಬಸವರಾಜ ಯರನಾಳ, ದಲಿತ ಸೇನೆಯ ತಾಲೂಕಾಧ್ಯಕ್ಷ ಮಹೇಶ ಜಾಬಾನವರ, ಎಸ್ ಡಿಪಿಐ ತಾಲೂಕಾಧ್ಯಕ್ಷ ಜಾಫರ್ ಇನಾಮದರ್ ಮಾತನಾಡಿ, ಸಂವಿಧಾನದ ಮೂಲಕ ನಮ್ಮೆಲ್ಲರ ಬದುಕು ರೂಪಿಸಿದ, ಧ್ವನಿ ಇಲ್ಲದವರ ಧ್ವನಿಯಾಗಿರುವ ಅಂಬೇಡ್ಕರ್ ಅವರ ಬಗ್ಗೆ ಅಗೌರವದಿಂದ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡಬೇಕು ಅಂತಾ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲದ್ದಾರ್ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ದಲಿತ ಸೇನೆ ಜಿಲ್ಲಾಧ್ಯಕ್ಷ ಖಾಜು ಹೊಸಮನಿ, ಯುವ ಘಟಕದ ಅಧ್ಯಕ್ಷ ಅಂಬರೀಶ ಕೊಂಡಗೂಳಿ, ಉಪಾಧ್ಯಕ್ಷ ಅಬ್ದುಲ್ ಮುಲ್ಲಾ, ನಗರ ಅಧ್ಯಕ್ಷ ಜಾವೀದ್ ಕರ್ಜಗಿ, ತಾಲೂಕು ಉಪಾಧ್ಯಕ್ಷ ಶಾಹುಸೇನಿ ಬುಕ್ಕದ, ಜಾಫರ ಇನಾಮದರ, ಮಹಿಳಾ ಮುಖಂಡರಾದ ಸಫಿಯಾ ಶೇಖ್, ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಸುಮಿತ ಕಕ್ಕಸಗೇರಿ, ಲತೀಫ್ ತಾಂಬೋಳಿ, ಸಯ್ಯದ ಕರ್ಜಗಿ, ಇಲಿಯಾಸ್ ಮುಲ್ಲಾ ಸೇರಿದಂತೆ ಇತರರು ಹಾಜರಿದ್ದರು.

WhatsApp Group Join Now
Telegram Group Join Now
Share This Article