Ad imageAd image

ಅಂಬೇಡ್ಕರ್ ಅವರ ವಿಚಾರಗಳು ಎಲ್ಲರಿಗೂ ದಾರಿದೀಪ: ಹರ್ಷವರ್ಧನ ಪೂಜಾರಿ

ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 68ನೇ ಪರಿನಿಬ್ಬಾಣದ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಮಾಧ್ಯಮರಂಗ ಫೌಂಡೇಶನ್ ವತಿಯಿಂದ ಗೌರವ ನಮನ ಸಲ್ಲಿಸಲಾಯಿತು.

Nagesh Talawar
ಅಂಬೇಡ್ಕರ್ ಅವರ ವಿಚಾರಗಳು ಎಲ್ಲರಿಗೂ ದಾರಿದೀಪ: ಹರ್ಷವರ್ಧನ ಪೂಜಾರಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 68ನೇ ಪರಿನಿಬ್ಬಾಣದ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಮಾಧ್ಯಮರಂಗ ಫೌಂಡೇಶನ್ ವತಿಯಿಂದ ಗೌರವ ನಮನ ಸಲ್ಲಿಸಲಾಯಿತು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜೊತೆಯಾಗಿ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಿಧಾನ ಪೀಠಿಕೆ ಓದು ಹಾಗೂ ಅವರ ವೈಚಾರಿಕ ವಿಚಾರಗಳ ಕುರಿತು ಮಾತನಾಡಲಾಯಿತು.

ದಲಿತ್ ವಿದ್ಯಾರ್ಥಿ ಪರಿಷತ್ ಬೆಳಗಾವಿ ವಿಭಾಗದ ಅಧ್ಯಕ್ಷ ಹರ್ಷವರ್ಧನ ಪೂಜಾರಿ ಮಾತನಾಡಿ, ಅಂಬೇಡ್ಕರ್ ಅವರ ಬದುಕೇ ಹೋರಾಟದ ಹಾದಿ. ಆ ಹೋರಾಟ ತಳಸಮುದಾಯದವರನ್ನು ಮುನ್ನಲೆಗೆ ತರವುದಾಗಿದೆ. ಶತಶತಮಾನಗಳಿಂದ ಆಗುತ್ತಿರುವ ದಬ್ಬಾಳಿಕೆ ವಿರುದ್ಧ ಹೋರಾಡಿ ಎಲ್ಲರಿಗೂ ಸಮಾನತೆ ಜೀವನ ನೀಡುವ ಸಲುವಾಗಿ ರಚಿಸಿದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಡಿಸೆಂಬರ್ 6, 1956ರಂದು ಅವರ ಅಗಲಿದರು. ಆದರೆ, ಅವರ ವಿಚಾರಗಳು ಎಲ್ಲರಿಗೂ ದಾರಿದೀಪ ಎಂದು ಹೇಳಿದರು.

ವಿದ್ಯಾರ್ಥಿ ನಿಂಗರಾಜ ಮಾಲಗತ್ತಿ ಮಾತನಾಡಿ, ಸಮಾಜದ ಪ್ರತಿಯೊಬ್ಬರು ಸಮಾನತೆಯಿಂದ ಬದುಕುವ ಹಕ್ಕಿದೆ ಎಂದು ಹೇಳಿದವರು ಡಾ.ಬಿ.ಆರ್ ಅಂಬೇಡ್ಕರ್ ಅವರು. ಹೀಗಾಗಿ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ನಮ್ಮ ಎಲ್ಲ ಸಮಸ್ಯೆಗಳಿಗೆ ಶಿಕ್ಷಣ ಒಂದೇ ಮಾರ್ಗ ಎಂದಿದ್ದಾರೆ ಅಂತಾ ಹೇಳಿದರು. ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ ನಾಗೇಶ ತಳವಾರ, ಅಂಬೇಡ್ಕರ್ ಅವರ ವೈಚಾರಿಕ ವಿಚಾರಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಪತ್ರಕರ್ತರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಉಪನ್ಯಾಸಕರಾದ ಅಶೋಕ ಬಿರಾದಾರ, ರಾಜಶೇಖ ಶೆಟ್ಟಿ, ಬರಹಗಾರ ಸಿದ್ರಾಮ ಬ್ಯಾಕೋಡ, ವಿದ್ಯಾರ್ಥಿಗಳಾದ ಸೋಯಲ್ ಚಾಕ್ರೆ, ಇತುಂಬಾಶ್ ಮುಲ್ಲಾ, ಮಾಂತು ಕಲಕೇರಿ, ಸಮೀರ ಅಳಗುಂಡಗಿ, ಶಫೀಕ ಆಲಗೂರ, ಸುನಿಲ ಹೊಸಮನಿ, ಸತೀಶ ಸಾಲಕ್ಕಿ, ಪ್ರವೀಣ ಪೂಜಾರಿ, ಗಣೇಶ, ಮಲ್ಲು, ಪ್ರಮೋದ, ನವೀದ್ ಮನಿಯಾರ, ಗುರುಪ್ರಸಾದ ಮಠ, ಮಾಂತೇಶ ಅತ್ನೂರ, ಸುದೀಪ ಹಿರೋಳ್ಳಿ, ಶ್ರೇಯಸ ಹಿರೋಳ್ಳಿ ಸೇರಿದಂತೆ ಇತರರು ಉಪಸ್ಥಿತಿದ್ದರು.

WhatsApp Group Join Now
Telegram Group Join Now
Share This Article