ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ಹಿನ್ನಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ಕಟ್ಟಾ ಪ್ರತಿಪಾದಕರಾಗಿದ್ದ ಅಂಬೇಡ್ಕರ್ ಅವರಿಗೆ ಕೃತಜ್ಞತೆಗಳು. ಇವತ್ತಿನ ಸಂದರ್ಭದಲ್ಲಿ ಅವರ ವಿಚಾರಗಳನ್ನು, ಭಾರತಕ್ಕೆ ಕೊಡುಗೆಯಾಗಿ ನೀಡಿದ ಅತ್ಯುತ್ತಮ ಸಂವಿಧಾನವನ್ನು ರಕ್ಷಿಸುವ ತುರ್ತು ಇದೆ ಎಂದಿದ್ದಾರೆ.
ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಹಾಗೂ ನ್ಯಾಯದ ಪರವಾಗಿ ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದರು. ದೀನದಲಿತರ ಪರವಾಗಿ ನಿಂತು, ದೇಶದ ಸಾಮಾಜಿಕ ರಚನೆಯನ್ನು ಪರಿವರ್ತಿಸುವ ಸಂವಿಧಾನವನ್ನು ನೀಡಿದರು. ಅವರಿಗೆ ಗೌರವ ನಮನಗಳು ಎಂದಿದ್ದಾರೆ. ಡಿಸೆಂಬರ್ 6, 1956ರಂದು ಅಂಬೇಡ್ಕರ್ ಅವರು ನಿಧನರಾದರು. ಈ ದಿನವನ್ನು ಪರಿನಿರ್ವಾಣ ಅಥವ ಪರಿನಿಬ್ಬಾಣ ಎಂದು ಕರೆಲಾಗುತ್ತೆ.