ಪ್ರಜಾಸ್ತ್ರ ಸುದ್ದಿ
ಇಂಡಿಯನ್ ಕ್ರಿಕೆಟ್ ಟೀಂನ ಸ್ಪಿನ್ನರ್ ಅಮಿತ್ ಮಿಶ್ರಾ ಎಲ್ಲ ಮಾದರಿಯ ಆಟಕ್ಕೆ ಗುರುವಾರ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅಮಿತ ಮಿಶ್ರಾ, ಕ್ರೀಡೆ ನನ್ನ ಮೊದಲ ಪ್ರೀತಿ, ಶಿಕ್ಷಕ ಹಾಗೂ ನನ್ನ ಖುಷಿಯ ಬಹುದೊಡ್ಡ ಮೂಲ. ಈ ಹಾದಿ ಅಗಣಿತವಾದ ಭಾವನೆಗಳನ್ನು ಹೊಂದಿದೆ. ಬಿಸಿಸಿಐ, ಹರಿಯಾಣ ಕ್ರಿಕೆಟ್ ಅಸೋಸಿಯೇಷನ್, ಕೋಚ್, ಸಹವರ್ತಿಗಳು, ಸಿಬ್ಬಂದಿ ಅತಿ ಮುಖ್ಯವಾಗಿ ನನ್ನ ಬೆಂಬಲವಾಗಿ ನಿಂತ ಅಭಿಮಾನಿಗಳು ಸೇರಿ ಎಲ್ಲರಿಗೂ ಧನ್ಯವಾದಗಳು ಎಂದು ಬರಹವನ್ನು ಹಂಚಿಕೊಂಡಿದ್ದಾರೆ.
2003ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯವಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಶುರು ಮಾಡಿದರು. 22 ಟೆಸ್ಟ್, 36 ಏಕದಿನ ಪಂದ್ಯ ಹಾಗೂ 10 ಟಿ-20 ಪಂದ್ಯಗಳನ್ನು ಆಡಿದ್ದಾರೆ. 156 ವಿಕೆಟ್ ಪಡೆದಿದ್ದಾರೆ. ಇನ್ನು ಐಪಿಎಲ್ ನಲ್ಲಿ 42 ಪಂದ್ಯಗಳಿಂದ 162 ವಿಕೆಟ್ ಪಡೆದಿದ್ದಾರೆ.