ಪ್ರಜಾಸ್ತ್ರ ಸುದ್ದಿ
ಧರ್ಮಸ್ಥಳ(Dharmasthala): ಇಲ್ಲಿ ಅಪರಾಧಿ ಕೃತ್ಯಗಳು ನಡೆದಿದ್ದು, ನೂರಾರು ಹೆಣಗಳನ್ನು ನಾನು ಹೂತುಹಾಕಿದ್ದೇನೆ ಎಂದು ಹೇಳಿರುವ ಸಾಕ್ಷಿ ದೂರುದಾರ ಪ್ರಕರಣದ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ. ಇದರ ವರದಿ ಮಾಡಲು ಹೋದ ಯುಟ್ಯೂಬ್ ಮಾಧ್ಯಮದವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಇದರಿಂದಾಗಿ ಮೂವರು ಗಾಯಗೊಂಡಿದ್ದಾರೆ. ಅಲ್ಲಿಯ ಕೆಲವು ಪುಡಾರಿಗಳು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಗಾಯಗೊಂಡ ಮಾಧ್ಯಮದವರು ಆಸ್ಪತ್ರೆಯಲ್ಲಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ರಜತ್ ಸೌಜನ್ಯ ಮನೆಗೆ ಭೇಟಿ ನೀಡಿದ್ದರು. ಇದನ್ನು ತಿಳಿದು ಅವರನ್ನು ಮಾತನಾಡಿರುವ ಯುಟ್ಯೂಬರ್ಸ್ ಗಳು ಪಂಗಾಳ ರಸ್ತೆಯಲ್ಲಿ ಸೇರಿದ್ದರು. ಸಂಚಾರಿ ಸ್ಟುಡಿಯೋದ ವಿಜಯ್, ಕುಡ್ಲ ರ್ಯಾಂಪೇಜ್ ಯುಟ್ಯೂಬ್ ಚಾನಲ್ ಅಜಯ್ ಅಂಚನ್, ಕ್ಯಾಮೆರಾಮನ್, ಯುನೈಟೆಡ್ ಮೀಡಿಯಾದ ಅಭಿಷೇಕ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಎರಡು ಕ್ಯಾಮೆರಾಗಳನ್ನು, ಒಂದು ಕಾರಿಗೆ ಹಾನಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆಯನ್ನು ಖಂಡಿಸಿ ಒಂದು ಗುಂಪು ಪ್ರತಿಭಟನೆ ನಡೆಸಿತು. ಇದನ್ನು ನೋಡಿದ ಮತ್ತೊಂದು ಗುಂಪು ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲಾಗುತ್ತಿದೆ ಉದ್ದೇಶಪೂರ್ವಕವಾಗಿ ಕಳಂಕ ತರುವ ಕೆಲಸ ಮಾಡಲಾಗುತ್ತಿದೆ. ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಸಧ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ಎಸ್ಪಿ ಅರುಣ್.ಕೆ ತಿಳಿಸಿದ್ದಾರೆ.