ಪ್ರಜಾಸ್ತ್ರ ಸುದ್ದಿ
ಓವಲ್(Oval): ಇಲ್ಲಿನ ಆಡಿಲೇಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಆಘಾತ ಎದುರಿಸಿದೆ. ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಪಂದ್ಯದ ಮೊದಲ ಎಸೆತದಲ್ಲಿಯೇ ಆಸೀಸ್ ಅನುಭವಿ ಮಿಚಲ್ ಸ್ಟಾರ್ಕ್ ಯುವ ಆಟಗಾರ ಯಶಸ್ವಿ ಜೈಸ್ವಾಲ್ ವಿಕೆಟ್ ಪಡೆಯುವ ಮೂಲಕ ಶಾಕ್ ನೀಡಿದರು.
ಗೋಲ್ಡನ್ ಡಕ್ ಔಟ್ ಆದ ಜೈಸ್ವಾಲ್ ನಿರಾಸೆಯಿಂದ ಪೆವಿಲಿಯನತ್ತ ಹೆಜ್ಜೆ ಹಾಕಿದರು. ಮೊದಲ ಪಂದ್ಯದಲ್ಲೂ ಸಹ ಸ್ಟಾರ್ಕ್ ಬೌಲಿಂಗ್ ನಲ್ಲಿಯೇ ಶೂನ್ಯಕ್ಕೆ ಔಟ್ ಆಗಿದ್ದರು. ಆದರೆ, 2ನೇ ಇನ್ನಿಂಗ್ಸ್ ನಲ್ಲಿ ಭರ್ಜರಿ 161 ರನ್ ಗಳಿಸಿದರು. ಇನ್ನು ಕೆ.ಎಲ್ ರಾಹುಲ್ 37, ವಿರಾಟ್ ಕೊಹ್ಲಿ 7 ರನ್ ಗಳಿಗೆ ಔಟ್ ಮಾಡಿ ಮಿಚೆಲ್ ಸ್ಟಾರ್ಕ್ ಮಿಂಚಿದರು. 31 ರನ್ ಗಳಿಂದ ಆಡುತ್ತಿದ್ದ ಶುಭನಂ ಗಿಲ್ ಸ್ಕಾಟ್ ಬೊಲನ್ಡ್ ಗೆ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಟೀ ವಿರಾಮಕ್ಕೆ 23 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 82 ರನ್ ಬಂದಿದೆ. ರಿಷಬ್ ಪಂತ್ 4, ನಾಯಕ ರೋಹಿತ್ ಶರ್ಮಾ 1 ರನ್ ಗಳಿಂದ ಕ್ರಿಸ್ ನಲ್ಲಿದ್ದಾರೆ.