Ad imageAd image

ಸಿಂದಗಿಯಲ್ಲಿ ಭೂಕಂಪನ!

Nagesh Talawar
ಸಿಂದಗಿಯಲ್ಲಿ ಭೂಕಂಪನ!
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಗುರುವಾರ ತಡರಾತ್ರಿ ಭೂಕಂಪನವಾಗಿದೆ ಎಂದು ಹೇಳಲಾಗುತ್ತಿದೆ. ಪಟ್ಟಣದ ಹಲವು ಬಡಾವಣೆಗಳಲ್ಲಿ ತಡರಾತ್ರಿ 1.30 ಹಾಗೂ 3 ಗಂಟೆ ಸುಮಾರಿನಲ್ಲಿ ಎರಡ್ಮೂರು ಬಾರಿ ಭೂಕಂಪನವಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಭಯದಿಂದ ರಾತ್ರಿ ಮನೆಯಿಂದ ಹೊರ ಬಂದು ತಿರುಗಾಡಿದ ಘಟನೆಗಳು ನಡೆದಿವೆ.

ಪಟ್ಟಣದ ಬಹುತೇಕ ಕಡೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಜನರು ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಬೇಕು ಎನ್ನುತ್ತಿದ್ದಾರೆ. ಜನರು ಈಗಾಗ್ಲೇ ಭಯಭೀತರಾಗಿದ್ದು, ನಿಜವಾಗಲೂ ಭೂಕಂಪನವಾಗಿದ್ಯಾ ಏನು ಅನ್ನೋದರ ಕುರಿತು ಮಾಹಿತಿ ನೀಡಬೇಕು ಎನ್ನುತ್ತಿದ್ದಾರೆ.

WhatsApp Group Join Now
Telegram Group Join Now
Share This Article