ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಅಕ್ಕನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆಕೆಯ ತಮ್ಮ ಕೊಲೆ ಮಾಡಿದ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. ದಿಲೀಪ್ ಹಿತ್ತಲಮನಿ(47) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ರಾಜಯ್ಯ ಕೊಲೆ ಆರೋಪಿಯಾಗಿದ್ದಾನೆ.
ರಾಜಯ್ಯ ಅಕ್ಕನ ಜೊತೆಗೆ ಕಾಕೋಳ ಗ್ರಾಮದ ದಿಲೀಪ್ ಅಕ್ರಮ ಸಂಬಂಧ ಹೊಂದಿದ್ದ. ಎಷ್ಟೇ ಹೇಳಿದರೂ ಬಿಟ್ಟಿರಲಿಲ್ಲ. ರೆಡ್ ಹ್ಯಾಂಡ್ ಆಗಿ ಸಿಕ್ಕಬಿದ್ದಾಗ ಗಲಾಟೆ ನಡೆದಿದೆ. ಆಗ ಆತನ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನವಾಗಿದೆ.