ಪ್ರಜಾಸ್ತ್ರ ಸುದ್ದಿ
ಹಾಲಿವುಡ್ ಸಿನಿಮಾಗಳು ಸಹ ಇಂದು ಭಾರತದಲ್ಲಿ ಸೌಂಡ್ ಮಾಡುತ್ತಿವೆ. ಭಾರತದ ಸಿನಿಮಾ ಮಾರುಕಟ್ಟೆ ಹಾಲಿವುಡ್ ಮೂವಿಗಳಿಗೆ ದೊಡ್ಡ ಲಾಭ ತಂದು ಕೊಡುತ್ತಿವೆ. ಹೀಗಾಗಿ ಭಾರತದ ಹಲವು ಭಾಷೆಗಳಿಗೆ ಡಬ್ ಮಾಡಿ ಸಿನಿಮಾ ಬಿಡುಗಡೆ ಮಾಡುತ್ತಿವೆ. ಅವತಾರ್ ಸರಣಿಯ ಮೊದಲ ಎರಡು ಚಿತ್ರಗಳು ಸೂಪರ್ ಹಿಟ್ ಆದವು. ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಆಕ್ಷನ್ ಕಟ್ ಹೇಳಿರುವ ಸಾವಿರಾರು ಕೋಟಿ ರೂಪಾಯಿ ಬಜೆಟ್ ನ ಅವತಾರ್-3, ಫೈರ್ ಅಂಡ್ ಆಶ್ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿತ್ತು. ಬಟ್ ಭಾರತದಲ್ಲಿ ದೊಡ್ಡ ಯಶಸ್ಸು ತಂದು ಕೊಡಲಿಲ್ಲ.
ಅವತಾರ್-3 ಸಿನಿಮಾ ಭಾರತದಲ್ಲಿ 100 ಕೋಟಿ ಗಳಿಸಿದೆ. ಇದೀಗ ಯಶಸ್ವಿ ಅನಕೊಂಡ ಸರಣಿಯ ಚಿತ್ರ ಸಹ ಮಕಾಡೆ ಮಲಗಿದೆ. ಟಾಮ್ ಜಾರ್ಮಿಕನ್ ನಿರ್ದೇಶನದ ಚಿತ್ರದಲ್ಲಿ ಜಾಕ್ ಬ್ಲಾಕ್, ಪೌಲ್ ರುಡ್ ನಟಿಸಿದ್ದಾರೆ. ಥ್ರಿಲ್ಲರ್ ಕಥೆಯ ಜೊತೆಗೆ ಹಾಸ್ಯವನ್ನು ಮಿಶ್ರಣ ಮಾಡಲಾಗಿದೆ. ಆದರೆ, ಭಾರತದಲ್ಲಿ ದೊಡ್ಡ ಸಕ್ಸಸ್ ಸಿಗಲಿಲ್ಲ. ಇಲ್ಲಿ 2 ಕೋಟಿ ರೂಪಾಯಿ ಸಹ ಗಳಿಕೆ ಮಾಡಿಲ್ಲ. ವಿಶ್ವ ಮಾರುಕಟ್ಟೆಯಲ್ಲಿ ಕೇವಲ 80 ಕೋಟಿ ರೂಪಾಯಿ ಗಳಿಸಿದೆಯಂತೆ.



