ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಗ್ರಾಮ ಪಂಚಾಯ್ತಿಗೆ ಅಧಿಕಾರಿಗಳು, ಸಿಬ್ಬಂದಿ ಸರಿಯಾದ ಸಮಯಕ್ಕೆ ಬರುತ್ತಿಲ್ಲವೆಂದು ಹೇಳಿ ಗ್ರಾಮಸ್ಥರು ಪಂಚಾಯ್ತಿ ಕಚೇರಿಯ ಗೇಟ್ ಗೆ ಮುಳ್ಳು ಕಂಟಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಿಂದಗಿ ತಾಲೂಕಿನ ರಾಂಪೂರ ಪಿ.ಎ ಗ್ರಾಮದಲ್ಲಿ ನಡೆದಿದೆ. ಪ್ರತಿ ನಿತ್ಯ 11.30, 12 ಗಂಟೆಯಾದರೂ ಅಧಿಕಾರಿ, ಸಿಬ್ಬಂದಿ ಪಂಚಾಯ್ತಿಗೆ ಬರುವುದಿಲ್ಲ. ಇದರಿಂದಾಗಿ ನಮ್ಮ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ದಿನಪೂರ್ತಿ ಕಾಯುವುದು ಆಗಿದೆ. ಇದು ಕೇವಲ ಒಂದು ದಿನ ಸಮಸ್ಯೆಯಲ್ಲ. ನಿತ್ಯ ಇದೆ ಆಗಿದ್ದು, ತಾಲೂಕು ಪಂಚಾಯ್ತಿ ಇಒ ರಾಮು ಜಿ ಅಗ್ನಿ ಅವರು ಇತ್ತ ಗಮನ ಹರಿಸಬೇಕು ಎಂದು ರಾಂಪೂರ ಪಿಎ ಗ್ರಾಮಸ್ಥರು ಆಗ್ರಹಿಸಿದ್ದಾರೆ.




