Ad imageAd image

ಮೊದಲು ಹಡಪದ ಅಪ್ಪಣ್ಣನವರನ್ನು ನೋಡಲು ಹೇಳುತ್ತಿದ್ದ ಅಣ್ಣ ಬಸವಣ್ಣ: ಶಿವಾನಂದ ಹಡಪದ

ಶರಣ ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ಮಾಜಿ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು.

Nagesh Talawar
ಮೊದಲು ಹಡಪದ ಅಪ್ಪಣ್ಣನವರನ್ನು ನೋಡಲು ಹೇಳುತ್ತಿದ್ದ ಅಣ್ಣ ಬಸವಣ್ಣ: ಶಿವಾನಂದ ಹಡಪದ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಶರಣ ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದು ಮಾಜಿ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು.

ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಭಾನುವಾರ ಹಡಪದ(Hadapada Appanna) ಅಪ್ಪಣ್ಣನವರ ಜಯಂತಿ ಹಿನ್ನಲೆಯಲ್ಲಿ ಫೋಟೋ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಾನಂದ ಬಡಾನೂರ ಮಾತನಾಡಿ ಹಡಪದ ಅಪ್ಪಣ್ಣನವರು ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದರು. ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರಿಗೆ ಎಂದರು.

ಹಡಪದ ಅಪ್ಪಣ್ಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಹಡಪದ ಮಾತನಾಡಿ ಸಮಾಜದಲ್ಲಿ ತಾಂಡವಾಡುವ ಮೂಢ ನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೆ ಅಣ್ಣ(Basavanna) ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೊಡಿಕೊಂಡು ಬರಬೇಕೆಂದು ತಿಳಿಸುತ್ತಿದ್ದರು ಎಂದರು. ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರಡ್ಡಿ, ಕಂಠೆಪ್ಪ ಹಡಪದ, ಜಟ್ಟಪ್ಪ ಹಡಪದ, ಶಿವಶರಣ ಹಡಪದ, ಮಂಜುನಾಥ ಹಡಪದ, ಸುನಂದ ಯಂಪೂರೆ, ಮುಖ್ಯಶಿಕ್ಷಕಿ ಎಸ್.ಎಂ ಮಸಳಿ, ಸುಭಾಸ ದೇವರನಾವದಗಿ, ರೇವಣಸಿದ್ದ ಹಡಪದ, ರವಿ ಹಡಪದ, ಶಿವಶರಣ ಬಂಕಲಗಿ, ಪ್ರವೀಣ ಹಡಪದ, ಭಾಗೇಶ ದೇವೂರ, ಶರಣು ಬ್ಯಾಕೋಡ, ಚಿದಾನಂದ ಹಡಪದ, ಶೇಖಪ್ಪ ಹಡಪದ ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article