ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ನಗರದ ನೀಲಕಂಠೇಶ್ವರ ಶ್ರೀಶೈಲ ಪಾದಯಾತ್ರಾ ಕಮಿಟಿಯಿಂದ ಸುಮಾರು 400ಕ್ಕೂ ಹೆಚ್ಚು ಭಕ್ತರು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ವಿಜಯಪುರದಿಂದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಈ ವೇಳೆ ಮಾರ್ಚ್ 8ರಂದು ಸುರಪುರ ತಾಲೂಕಿನ ಮಾರ್ಗವಾಗಿ ಸಂಚರಿಸುವಾಗ ದಾರಿಯುದ್ದಕ್ಕೂ ಮಣಿಕಂಠ ಫೌಂಡೇಶನ್ ವತಿಯಿಂದ ಭಕ್ತರಿಗೆ ನೀರಿನ ಬಾಟಲ್ ಗಳನ್ನು ನೀಡಲಾಯಿತು. ಸುಗೂರ ಗ್ರಾಮದ ಬಯಲು ಪ್ರದೇಶದಲ್ಲಿ ರಾತ್ರಿ ವಸ್ತಿಯನ್ನು ಮಾಡಿದ ಪ್ರಯುಕ್ತ ಪಾದಯಾತ್ರಿಗಳಿಗೆ ಅನ್ನ ದಾಸೋಹವನ್ನು ಫೌಂಡೇಶನ್ ಸದಸ್ಯ ಮಡಿವಾಳಯ್ಯ ಹಿರೇಮಠ (ಮಡುಸ್ವಾಮಿ) ಅವರು ಆಯೋಜಿಸಿದ್ದರು.
ಪಾದಯಾತ್ರಿಗಳ ಜೊತೆ ಭಾಗಿಯಾದ ಮಡುಸ್ವಾಮಿ ಶ್ರೀಶೈಲ ಮಲ್ಲಿಕಾರ್ಜುನನ ನಂದಿಕೋಲಕ್ಕೆ ವಿಶೇಷ ಅಭಿಷೇಕ ಹಾಗೂ ಪೂಜೆ ಪುನಸ್ಕಾರ ನೆರವೇರಿಸಿದರು. ಈ ವೇಳೆ ಪಾದಯಾತ್ರಿಗಳ ಕಮಿಟಿಯ ಪದಾಧಿಕಾರಿಗಳಾದ ಮಹೇಶ ಬಿದನೂರ ಮಾತನಾಡಿ, ಮಣಿಕಂಠ ಫೌಂಡೇಶನ್ ಈ ಸೇವೆಯು ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದ್ದು, ಇಂತಹ ಸೇವಾ ಕಾರ್ಯಕ್ರಗಳು ಸಂಘದಿಂದ ಮುಂದುವರೆಯಲಿಯೆಂದು ಆಶಿಸುತ್ತೇನೆ ಎಂದರು. ಫೌಂಡೇಶನ್ ಸದಸ್ಯರಾದ ರಾಜು ಗುನ್ನಾಪೂರ, ಅಮೋಘಸಿದ್ದ ಕರಾಂಡೆ, ಸತೀಶ ರಾಠೋಡ, ಸಚಿನ್ ಚವ್ಹಾಣ, ಸಂದೀಪ ಪವಾರ, ಸೋಮಶೇಖರ, ಪ್ರಶಾಂತ, ಅಭಿಷೇಕ, ನವೀನ, ಲಾಳೇಮಶಾಕ್, ರಾವುತರಾಯ, ಕೃಷ್ಣಾ ಹಾಗೂ ಇತರರು ಉಪಸ್ಥಿತರಿದ್ದರು.




