ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಗಾಂಜಾ ವಿಚಾರಕ್ಕೆ ಸಂಬಂಧಿಸಿದಂತೆ ಅಣ್ಣ ತಮ್ಮಿಂದರ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟ ಘಟನೆ ತಾಲೂಕಿನ ನಿಲಜಿ ಗ್ರಾಮದಲ್ಲಿ ನಡೆದಿದೆ. ಸುಶಾಂತ ಸುಭಾಷ ಪಾಟೀಲ(20) ಮೃತ ಸಹೋದರನಾಗಿದ್ದಾನೆ. ಓಂಕಾರ ಸುಭಾಷ ಪಾಟೀಲ(23) ಗಾಯಗೊಂಡ ಅಣ್ಣನಾಗಿದ್ದಾನೆ. ಶುಕ್ರವಾರ ತಡರಾತ್ರಿ ಈ ಒಂದು ಘಟನೆ ನಡೆದಿದೆ. ಗಾಯಾಳು ಓಂಕಾರನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರಿಯಾಗಿ ಓದದೆ, ಕೆಲಸವೂ ಮಾಡದೆ ಸಹೋದರರು ಗಲಾಟೆ ಮಾಡಿಕೊಳ್ಳುತ್ತಿದ್ದರು. ನಿನ್ನೆ ಮಧ್ಯಾಹ್ನ ಸಹ ಗಲಾಟೆ ಮಾಡಿಕೊಂಡಿದ್ದಾರೆ. ಪೋಷಕರು ಎಷ್ಟೇ ಬುದ್ದಿ ಹೇಳಿದರೂ ಕೇಳುತ್ತಿರಲಿಲ್ಲ. ರಾತ್ರಿ ಸ್ಟೇರ್ ಕೇಸ್ ಮೇಲೆ ಗಾಂಜಾ ವಿಚಾರಕ್ಕೆ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಆಗ ಎರಡನೇ ಮಹಡಿಯಿಂದ ಇಬ್ಬರು ಕೆಳಗೆ ಬಿದಿದ್ದಾರೆ. ಆಗ ಸುಶಾಂತ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಓಂಕಾರ ಗಾಯಗೊಂಡಿದ್ದಾನೆ. ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.