Ad imageAd image

6 ಕ್ಷೇತ್ರಗಳ ಉಸ್ತುವಾರಿಗೆ ಅಣ್ಣಮಲೈ ರಾಜೀನಾಮೆ

Nagesh Talawar
6 ಕ್ಷೇತ್ರಗಳ ಉಸ್ತುವಾರಿಗೆ ಅಣ್ಣಮಲೈ ರಾಜೀನಾಮೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೊಯಮತ್ತೂರು(Koimattur): ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ಬಿಜೆಪಿ ನೇಮಿಸಿತ್ತು. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಮಲೈ ಅವರಿಗೆ 6 ಕ್ಷೇತ್ರಗಳ ಉಸ್ತುವಾರಿ ನೀಡಲಾಗಿತ್ತು. ಇವುಗಳಿಗೆ ರಾಜೀನಾಮೆ ಸಲ್ಲಿಸಿದ್ದು, ಈ ಬಗ್ಗೆ ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಸಿಂಗನಲ್ಲೂರು, ಕಾರೈಕುಡಿ, ವಿರುಗಂಪಕ್ಕಂ, ಶ್ರೀವೈಕುಂಡಂ, ಮಧುರೈ ದಕ್ಷಿಣ ಹಾಗೂ ಪದ್ಮನಾಭಪುರಂ ಕ್ಷೇತ್ರಗಳಿಗೆ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಕೊಯಮತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನನ್ನ ತಂದೆಗೆ ಆರೋಗ್ಯ ಸಮಸ್ಯೆ ಇದ್ದು, ಅವರನ್ನು ನೋಡಿಕೊಳ್ಳಲು ನಾನು ಕೊಯಮತ್ತೂರಿನಲ್ಲಿ ಉಳಿದುಕೊಂಡಿದ್ದೇನೆ. ಹೀಗಾಗಿ ಪ್ರಾಥಮಿಕ ಕೆಲಸಗಳು, ಹೆಚ್ಚು ಪ್ರಯಾಣ ಮಾಡಲು ಆಗುತ್ತಿಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷ ನೈನಾರ್ ನಾಗೇಂತಿರನ್ ಅವರಿಗೆ ತಿಳಿಸಿದ್ದೇನೆ ಅಂತಾ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article