ಪ್ರಜಾಸ್ತ್ರ ಸುದ್ದಿ
ಪಾಟ್ನಾ(Patna): ಬಿಹಾರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಆರ್ ಜೆಡಿ ಪಕ್ಷವು 143 ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಐದು ಕಡೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳ ವಿರುದ್ಧ ಕಣಕ್ಕೆ ಇಳಿಯಲು ನಿರ್ಧರಿಸಿದೆ. 2ನೇ ಹಂತದ ಮತದಾನಕ್ಕೆ ನಾಮಪತ್ರ ಇಂದು ಕೊನೆಯ ದಿನವಾಗಿದ್ದು, ಇಂದೇ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
243 ಸದಸ್ಯ ಬಲವನ್ನು ಬಿಹಾರ ವಿಧಾನಸಭೆಯನ್ನು ಹೊಂದಿದೆ. ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. 14ರಂದು ಫಲಿತಾಂಶ ಪ್ರಕಟವಾಗಲಿದೆ.