ಪ್ರಜಾಸ್ತ್ರ ಸುದ್ದಿ
ದಕ್ಷಿಣ ಕನ್ನಡ(Dakshin Kannada): ಗುರುವಾರ ಬೀದರನಲ್ಲಿ ಎಸ್ ಬಿಐ ಬ್ಯಾಂಕ್ ಐಟಿಎಂ ದರೋಡೆ ಹಾಗೂ ಓರ್ವನ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಶುಕ್ರವಾರ ಮಧ್ಯಾಹ್ನ ಮತ್ತೊಂದು ಬ್ಯಾಂಕ್ ದರೋಡೆ ನಡೆದಿದೆ. ಬರೋಬ್ಬರಿ 12 ಕೋಟಿ ಮೌಲ್ಯದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದಾರೆ. 6 ಜನ ದರೋಡೆಕೋರರ ಗುಂಪು ಈ ಕೃತ್ಯವೆಸಗಿದೆ.
ನಗರದ ಕೆ.ಸಿ ರೋಡಿನಲ್ಲಿರುವ ಕೋಟೆಕಾರ್ ಬ್ಯಾಂಕ್ ಗೆ ನುಗ್ಗಿದ ದರೋಡೆಕೋರರು ಪಿಸ್ತೂಲ್, ತಲ್ವಾರ್ ತೋರಿಸಿ 12 ಕೋಟಿ ಮೌಲ್ಯದ ಚಿನ್ನಾಭರಣ, ನಗದು ದೋಚಿಸಿದ್ದಾರೆ. ಐವರು ಒಳಗೆ ನುಗ್ಗಿದರೆ ಓರ್ವ ಕಾರಿನಲ್ಲಿ ಕುಳಿತಿದ್ದ. ಮಂಗಳೂರಿಗೆ ಸಿಎಂ ಬಂದ ಹಿನ್ನಲೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಅಲ್ಲಿಗೆ ಹೋಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ದರೋಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಲ್ಲಿ ಸಭೆ ನಡೆಸಿ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಮಾಡಬೇಕೆಂದು ಆದೇಶಿಸಿದ್ದಾರೆ.
ದರೋಡೆ ಮಾಡಿ ಆರೋಪಿಗಳು ಇಷ್ಟು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ, ಎಷ್ಟೆಲ್ಲ ಟೋಲ್ ಗಳನ್ನು ದಾಟಿ ಹೋಗಿದ್ದಾರೆ, ತಕ್ಷಣ ಟೋಲ್ ಗಳನ್ನು ಯಾಕೆ ಬಿಗಿ ಮಾಡಲಿಲ್ಲ ಎನ್ನುವ ಪ್ರಶ್ನೆಗಳನ್ನು ಮಾಡಿದರು. ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಕಾಬಂಧಿ ಹಾಕಿ ಆದಷ್ಟು ಬೇಗ ಆರೋಪಿಗಳನ್ನು ಹಿಡಿದು ಕಠಿಣ ಕಾನೂನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.