ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಗರದಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿದ ಸಾಕಷ್ಟು ಹಾನಿ ಮಾಡಿದ ಘಟನೆಯ ನಡುವೆ ಶನಿವಾರ ಮುಂಜಾನೆ ಮತ್ತೊಂದು ಅನಾಹುತ ನಡೆದಿದೆ. ನಗರತ್ ಪೇಟೆಯ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಗಡ ಸಂಭವಿಸಿದೆ. ಈ ವೇಳೆ ರಾಜಸ್ಥಾನ್ ಮೂಲದ ವ್ಯಕ್ತಿಯೊಬ್ಬರು ಸಜೀವ ದಹನವಾಗಿದ್ದಾರೆ.
ಇನ್ನು ಮಹಿಳೆ ಹಾಗೂ ಇಬ್ಬರು ಮಕ್ಕಳು ಸಿಲುಕಿರುವ ಶಂಕೆ ಇದೆ. ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದು, ಅವರ ಸುಳಿವು ಪತ್ತೆಯಾಗಿಲ್ಲ. ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅನಾಹುತ ನಡೆದಿದೆ ಎನ್ನಲಾಗುತ್ತಿದೆ. ಕಟ್ಟಡದಲ್ಲಿ ಫ್ಲೋರ್ ಮ್ಯಾಟ್ ತಯಾರಿಸುವ ಘಟಕವಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.