ಪ್ರಜಾಸ್ತ್ರ ಸುದ್ದಿ
ಪ್ರಯಾಗ್ ರಾಜ್(Prayagraj): ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮತ್ತೊಂದು ಬೆಂಕಿ ಅನಾಹುತ ನಡೆದಿದೆ. ನಗರದ ಪ್ರದೇಶದ ಓಲ್ಡ್ ಜಿ.ಟಿ ರಸ್ತೆಯಲ್ಲಿನ ತುಳಿಸಿ ಚೌರಾಹಾ ಹತ್ತಿರದ ಸೆಕ್ಟರ್ 18ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ. ಆದರೆ, ಪದೆದಪದೆ ಬೆಂಕಿ ಅನಾಹುತಗಳು ನಡೆಯುತ್ತಲೇ ಇವೆ.
ಜನವರಿ 25ರಂದು ಸೆಕ್ಟರ್ 2ರಲ್ಲಿ ಬೆಂಕಿ ಅನಾಹುತ ನಡೆಯಿತು. ಎರಡು ಕಾರುಗಳು ಸುಟ್ಟು ಕರಕಲಾದವು. ಇದಾದ ಬಳಿಕ ಸೆಕ್ಟರ್ 19ರಲ್ಲಿ ಸಿಲಿಂಡರ್ ಸ್ಫೋಟಗೊಂಡು ಹಲವಾರು ಟೆಂಟ್ ಗಳು ನಾಶವಾದವು. ಮೌನಿ ಅಮವಾಸ್ಯೆ ದಿನ ಕಾಲ್ತುಳಿತದಿಂದ 30 ಜನರು ಮೃತಪಟ್ಟರು. ಇಂದು(ಫೆಬ್ರವರಿ 7) ಮತ್ತೆ ಬೆಂಕಿ ಅನಾಹುತ ಉಂಟಾಗಿದೆ. ಫೆಬ್ರವರಿ 26ರಂದು ಮಹಾಶಿವರಾತ್ರಿ ಹಬ್ಬದೊಂದಿಗೆ ಮಹಾಕುಂಭ ಮೇಳಕ್ಕೆ ತೆರೆ ಬೀಳಲಿದೆ.